ಟಿಪ್ಪು ಮತ್ತು ಕೊಡವರು

Author : ಅಡ್ಡಂಡ ಕಾರ್ಯಪ್ಪ

Pages 226

₹ 200.00




Year of Publication: 2016
Published by: ರಂಗಭೂಮಿ ಕೊಡಗು ಪ್ರಕಾಶನ
Address: ಪೊನ್ನಂಪೇಟೆ, ಕುಂದರಸ್ತೆ-571216 , ಜಿಲ್ಲೆ ಕೊಡಗು.
Phone: 9448422343

Synopsys

ಲೇಖಕ ಅಡ್ಡಂಡ ಕಾರ್ಯಪ್ಪ ಅವರ ಕೃತಿ-ಟಿಪ್ಪು ಮತ್ತು ಕೊಡವರು. ಬಚ್ಚಿಟ್ಟ ಸತ್ಯವನ್ನು ಬಿಚ್ಚಿಟ್ಟಾಗ ಎಂಬ ಉಪಶೀರ್ಷಿಕೆಯಡಿ ಇತಿಹಾಸದ ಅಂಶಗಳನ್ನು ಚರ್ಚಿಸಲಾಗಿದೆ. ಮೈಸೂರಿನ ಅರಸ ಟಿಪ್ಪು ಸುಲ್ತಾನನು ಈಗಿರುವ ಇತಿಹಾಸದ ಅಂಶಗಳಂತೆ ಇರಲಿಲ್ಲ. ಆತನೊಬ್ಬ ದೇಶದ್ರೋಹಿ ಆಗಿದ್ದ. ಮತಾಂತರವನ್ನು ಪ್ರಚೋದಿಸುತ್ತಿದ್ದು, ಮುಸ್ಲಿಂ ಹೊರತುಪಡಿಸಿ, ಅನ್ಯ ಧರ್ಮೀಯರನ್ನು ಪೀಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸುತ್ತಿದ್ದ. ಕೊಡವರ ಬಗ್ಗೆ ಆತನಿಗೆ ಅಸೂಹೆ ಇತ್ತು. ಕೊಡವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದ, ಹೆಣ್ಣುಮಕ್ಕಳನ್ನು ಅಗೌರವದಿಂದ ಕಂಡಿದ್ದಾನೆ. ಎಂಬ ಅಂಶಗಳನ್ನು ಈ ಕೃತಿ ಒಳಗೊಂಡಿದೆ. ಹೈದರಾಲಿಯು ಸಹ ಕ್ರೌರ್ಯದ ಮತ್ತೊಂದು ಮುಖ ಎಂದೇ ಪುರಾವೆಗಳ ಸಮೇತ ಸಾಬೀತು ಮಾಡಲು ಹೆಣಗುವುದು ಈ ಕೃತಿಯ ಪ್ರಯತ್ನವಾಗಿದೆ. ಕೃತಿಗೆ ಮುನ್ನುಡಿ ಬರೆದ ಖ್ಯಾತ ಸಂಶೋಧಕ ಡಾ. ಎಂ. ಚಿದನಂದ ಮೂರ್ತಿ `ಒಂದು ಅಮೋಘ, ನಿರ್ಬಿಡೆಯ ದಿಟ್ಟ ಕೃತಿ’ ಎಂದು ಬಣ್ಣಿಸಿದ್ದಾರೆ.

About the Author

ಅಡ್ಡಂಡ ಕಾರ್ಯಪ್ಪ

ಲೇಖಕ ಅಡ್ಡಂಡ ಕಾರ್ಯಪ್ಪ ಅವರು ಮೂಲತಃ ಕೊಡಗು ಜಿಲ್ಲೆಯವರು. ತಂದೆ ಅಡ್ಡಂಡ ಚೆಂಗಪ್ಪ, ತಾಯಿ ಅಡ್ಡಂಡ ತಂಗಮ್ಮ. ರಂಗಾಯಣ ಮೈಸೂರಿನ ನಿರ್ದೇಶಕರಾಗಿದ್ದರು.   ಬಿ.ಎ. ಪದವಿಯ ನಂತರ ನೀನಾಸಂ ರಂಗಶಿಕ್ಷಣದಲ್ಲಿ ರಂಗಭೂಮಿ ಕುರಿತಂತೆ ತರಬೇತಿ ಪಡೆದು ಸುಮಾರು ಹತ್ತು ವರ್ಷಗಳ ಕಾಲ ಸೃಷ್ಠಿ ಕೊಡವ ರಂಗ ಎಂಬ ತಮ್ಮದೇ ಒಂದು ರೆಪರ್ಟರಿ ರಂಗತಂಡವನ್ನು ಕಟ್ಟಿ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ನಾಡಿನಾದ್ಯಂತ ನಾಟಕ ಪ್ರದರ್ಶನಗಳನ್ನು ನೀಡಿದರು. ಮ್ಯಾಕ್‌ಬೆತ್, ಹ್ಯಾಮ್ಲೆಟ್, ಕಿಂಗ್‌ಲಿಯರ್, ಈಡಿಪಸ್, ದಂಗೆ ಮುಂಚಿನ ದಿನಗಳು, ಅರುಂಧತಿ ಆಲಾಪ, ತಬರನ ಕಥೆ ಮುಂತಾದ 20ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ನಿರ್ದೇಶಿಸಿದ್ದು, ಸುಮಾರು ...

READ MORE

Related Books