ಸಮಗ್ರ ಹಾಸ್ಯ

Author : ಬೇಲೂರು ರಾಮಮೂರ್ತಿ

Pages 554

₹ 360.00




Year of Publication: 2017
Published by: ತೇಜು ಪಬ್ಲಿಕೇಷನ್
Address: ನಂ. 233, 7ನೇ ಎ ಅಡ್ಡರಸ್ತೆ, ಶಾಸ್ತ್ರಿ ನಗರ, ಬೆಂಗಳೂರು-28
Phone: 9900195626

Synopsys

ಸಮಗ್ರ ಹಾಸ್ಯ-ಲೇಖಕ ಬೇಲೂರು ರಾಮಮೂರ್ತಿ ಅವರು ಬರೆದ ಹಾಸ್ಯ -ವಿನೋದ-ವಿಡಂಬನೆ ಬರೆಹಗಳ ಸಮಗ್ರ ಸಂಗ್ರಹ ಕೃತಿ ಇದು. ಕನ್ನಡ ಹಾಸ್ಯ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಕೆಲವೇ ಕೆಲವು ಬರೆಹಗಾರರ ಪೈಕಿ ಬೇಲೂರು ರಾಮಮೂರ್ತಿ ಒಬ್ಬರು. ಚುಟುಕಾದ ಭಾಷೆಯಿಂದ ಚುರುಕಾಗಿ ; ಅಷ್ಟೇ ಸ್ಪಷ್ಟವಾಗಿ ಬರೆಯುವ ಅವರ ಹಾಸ್ಯ ಸಾಹಿತ್ಯವು ವ್ಯಕ್ತಿ ಹಾಗೂ ಸಮಾಜದ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹೀಗಾಗಿ, ರಾಮಮೂರ್ತಿ ಅವರ ಬರೆಹಗಳ ಆಕರ್ಷಣೆ ಎಂದರೆ ತಿಳಿ ಹಾಸ್ಯ, ಆರೋಗ್ಯಕರ ವ್ಯಂಗ್ಯ -ವಿಡಂಬನೆ ಹಾಗೂ ಸರಳ ಭಾಷೆ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books