ವಾಗ್ಬಾಣಗಳು

Author : ಗಂಗಾವತಿ ಪ್ರಾಣೇಶ್

Pages 53

₹ 45.00




Year of Publication: 2011
Published by: ಬೀchi ಪ್ರಕಾಶನ
Address: #34 ಇ ಬ್ಲಾಕ್‌ ಬಡಾವಣೆ, ಕೊಡಿಗೆಹಳ್ಳಿ ಗೇಟ್‌, ಸ್ವಾತಿ ಗಾರ್ಡನ್‌ ಹೋಟೆಲ್ ಹಿಂಭಾಗ, ಸಹಕಾರ ನಗರ, ಬೆಂಗಳೂರು-560092
Phone: 9840093839

Synopsys

ಲೇಖಕ ಹಾಗೂ ನಗೆಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ವಾಗ್ಬಾಣಗಳು. ಹಿರಿಯ ಹಾಸ್ಯ ಸಾಹಿತಿ ಬೀchi ಅವರ ಸಾಹಿತ್ಯದ ಓದಿನಿಂದ ಪ್ರಭಾವಿತರಾದ ಲೇಖಕರು ಅವರ ಸಾಹಿತ್ಯದ ನಗೆ ಹನಿಗಳನ್ನು ಪ್ರಚಾರ ಹಾಗೂ ಪ್ರಸಾರಕ್ಕೆ ಬಳಸಿಕೊಂಡು , ಜೊತೆಗೆ ತಮ್ಮ ಅನುಭವಗಳನ್ನು ಸಹ ನಗೆಹನಿಗಳಾಗಿ ಪರಿವರ್ತಿಸಿ ಜನರನ್ನು ಮನರಂಜಿಸಿದ ಘಟನೆ, ಮಾತುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಈ ಮಾತುಗಳನ್ನೇ ಲೇಖಕರು ವಾಗ್ಬಾಣಗಳು ಎಂದು ಕರೆದಿದ್ದಾರೆ.

About the Author

ಗಂಗಾವತಿ ಪ್ರಾಣೇಶ್
(08 September 1961)

ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ  ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು.  ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್‌ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...

READ MORE

Related Books