ಪ್ರಳಯಾಂತಕರು ಹಾಗೂ ಇತರ ಹಾಸ್ಯ ಲೇಖನಗಳು

Author : ಪ್ರಕಾಶ್ ಕೆ. ನಾಡಿಗ್

Pages 116

₹ 100.00




Year of Publication: 2021
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: # 164/A, ಮೊದಲನೇ ಮಹಡಿ, ಎಂ.ಆರ್.ಎನ್. ಕಟ್ಟಡ, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9844098406

Synopsys

ಲೇಖಕ ಪ್ರಕಾಶ್ ನಾಡಿಗ್ ಅವರ ಕೃತಿ-ಪ್ರಳಯಾಂತಕರು ಹಾಗೂ ಇತರ ಹಾಸ್ಯ ಲೇಖನಗಳು. ಖ್ಯಾತ ಹಾಸ್ಯ ಲೇಖಕ ಎಚ್.ಡುಂಡಿರಾಜ್ ಅವರು ಕೃತಿಗೆ ಬೆನ್ನುಡಿ ಬರೆದು ‘ ಪ್ರಕಾಶ್ ನಾಡಿಗ್ ಅವರಲ್ಲಿ ಹಾಸ್ಯ ಬರಗಾರರು ಸಾಮಾನ್ಯವಾಗಿ ಬಳಸುವ ಉತ್ತೇಕ್ಷೆ, ವ್ಯಂಗ್ಯ, ವಿಡಂಬನೆ ಮತ್ತು ವಿರೋಧಾಭಾಸಗಳು ಸಾಕಷ್ಟಿವೆ. ನಗೆಬರಹಕ್ಕೆ ಅವರು ಆಯ್ದುಕೊಂಡ ವಸ್ತುಗಳೂ ಸಹ ಹಾಸ್ಯಲೇಖಕರಿಗೆ ಪ್ರಿಯವಾದ ಹೆಂಡತಿ, ಕೆಲಸದವಳು, ಟಿವಿ, ಕನಸು ಇತ್ಯಾದಿ. 2012ರ ಡಿಸೆಂಬರ್‌ನಲ್ಲಿ ಪ್ರಳಯ ಆಗಿಯೇಬಿಡುತ್ತದೆ ಎಂಬಂತೆ ನಮ್ಮ ನ್ಯೂಸ್ ಚಾನೆಲ್‌ಗಳು ಬಿಂಬಿಸಿ, ಅಮಾಯಕ ವೀಕ್ಷಕರನ್ನು ನಂಬಿಸಿ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿದ್ದವು. ಈ ಕುರಿತು ಪ್ರಕಾಶ್ ನಾಡಿಗರು ಪಳಯಾಂತಕರು ಎಂಬ ಸೊಗಸಾದ..ನಗೆಲೇಖನ ಬರೆದಿದ್ದಾರೆ. 2012ರಲ್ಲಿ ಪ್ರಳಯ ಆಗಲಿಲ್ಲವಾದರೂ ನ್ಯೂಸ್ ಚಾನಲ್‌ಗಳಲ್ಲಿ ಪ್ರಳಯಾಂತಕರ ಹಾವಳಿ ನಿಂತಿಲ್ಲ. ಅವರು ಮರಣ ಮೃದಂಗ, ರಕ್ಷಕ ಸರ್ವನಾಶ ಎಂದೆಲ್ಲ ಜನರನ್ನು ಹೆದರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಹೊಸ ಹೊಸ ವಿಷಯಗಳನ್ನು ಹುಡುಕುತ್ತಲೇ ಇರುತ್ತಾರೆ. ಮುರಾಣದ ಕಥೆ ಮತ್ತು ಪಾತ್ರಗಳನ್ನು ವರ್ತಮಾನದ ಕಣ್ಣಿಂದ ನೋಡಿ ಹಾಸ್ಯ ಹೊಮ್ಮಿಸುವ ನಗೆಲೇಖಕರಿಗೆ ಪ್ರಿಯವಾದ ಇನ್ನೊಂದು ತಂತ್ರವನ್ನೂ ನಾಡಿಗರು ಬಳಸಿದ್ದಾರೆ. ಟೀ ಕಾಫಿ ಮರಾಣ ಎಂಬ ಲೇಖನ ಹರಟೆಗೆ ಹತ್ತಿರವಾಗಿದ್ದು, ಅಲ್ಲಿ ಲೇಖಕರು ಪದಗಳ ಆಟದ ಮೂಲಕ ಹಾಸ್ಯವನ್ನು ಹೊಮ್ಮಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಪ್ರಕಾಶ್ ಕೆ. ನಾಡಿಗ್
(23 September 1972)

ಲೇಖಕ ಪ್ರಕಾಶ್ ಕೆ. ನಾಡಿಗ್‌  ಅವರು ಮೂಲತಃ ಶಿವಮೊಗ್ಗದವರು. ತಂದೆ ಕೇಶವ ಮೂರ್ತಿ ನಾಡಿಗ್, ತಾಯಿ ಶಾಂತಾ ನಾಡಿಗ್. ಶಿವಮೊಗ್ಗದ ದೇಶಿಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೂ ಶಿಕ್ಷಣ ಪೂರೈಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ  ಸೂಕ್ಷ್ಮಾಣುಜೀವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ತುಮಕೂರಿನ  ಔಷಧ  ತಯಾರಿಕಾ ಕಂಪನಿಯಲ್ಲಿ ಗುಣಮಟ್ಟ ಖಾತ್ರಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪ್ರವೃತ್ತಿಯಲ್ಲಿ ಲೇಖಕರು, ಅಂಕಣಕಾರರು ಆಗಿದ್ದಾರೆ.  ಗುಬ್ಬಚ್ಚಿ ಸಂತತಿಯನ್ನು ಉಳಿಸಿ ಬೆಳೆಸಲು " ಗುಬ್ಬಚ್ಚಿ ಸಂಘ" ಸ್ಥಾಪಿಸಿ, ಮಕ್ಕಳಲ್ಲಿ ಪರಿಸರ ಹಾಗೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಮಕ್ಕಳನ್ನು ಸೇರಿಸಿಕೊಂಡು ತುಮಕೂರಿನಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಕೃತಿಗಳು: ಗಣೇಶನ ಬೆಂಗ್ಳೂರ್ ಯಾತ್ರೆ, ಪುಟಾಣಿಗಳಿಗಾಗಿ ...

READ MORE

Related Books