ದಿನಕ್ಕೊಂದು ಮಾತು-ಕತೆ

Author : ಎಚ್. ಶಾಂತರಾಜ್ ಐತಾಳ್

Pages 250

₹ 225.00




Year of Publication: 2021
Published by: ದಿಗಂತ ಮುದ್ರಣ

Synopsys

ಹಿರಿಯ ಲೇಖಕ ಎಚ್.ಶಾಂತರಾಜ ಐತಾಳ್ ಅವರು 2021 ಪ್ರಕಟಿಸಿದ ಈ ಕೃತಿಯು ಕೊರೋನಾ ಕಾಲದಲ್ಲಿ 180 ದಿನಗಳ ಕಾಲ ಎಡೆಬಿಡದೆ ಅವರು ತಮ್ಮ ಸ್ನೇಹಿತ ಬಳಗಕ್ಕೆ ಕಳುಹಿಸಿದ ಸುಂದರ ಸಂದೇಶಗಳಿವೆ. ಪ್ರತಿ ದಿನದ ಸಂದೇಶಗಳನ್ನು ಅವರು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ 'ಜೀವನ ತತ್ವ ' ಪುರಾಣ ಮಾಹಿತಿ, ಧ್ಯೇಯವಾಕ್ಯಗಳು,ಸಂತವಾಣಿ, ಕವಿವಾಣಿ,ದಾಸವಾಣಿ, ಅಮೃತಬಿಂದು, ವಿವೇಕವಾಣಿ, ಸುಭಾಷಿತಗಳಾಗಿಯೂ ಓದುಗರ ಮನಸ್ಸನ್ನು ಪ್ರಫುಲ್ಲಗೊಳಿಸುವ 'ನಕ್ಕು ಬಿಡಿ' ಎಂದೂ ಎರಡು ಭಾಗಗಳಾಗಿ ವಿಂಗಡಿಸುತ್ತಾರೆ. ಜಗತ್ಪ್ರಸಿದ್ಧ ವ್ಯಕ್ತಿಗಳು, ಮಹರ್ಷಿಗಳು, ಮಹಾತ್ಮರು, ಮಹಾನ್ ಸಾಹಿತಿಗಳು ಹೇಳಿದ ಮಾತುಗಳ ಸಾರವು ಜೀವನ ತತ್ವಗಳಾಗಿ ರೂಪುಗೊಂಡರೆ ಡಿ.ವಿ.ಜಿಯವರ ಮಂಕು ತಿಮ್ಮನ ಕಗ್ಗದಲ್ಲಿರುವಂತೆ 'ನಕ್ಕು ನಗಿಸುವುದದುವೆ ಅತಿಶಯದ ಧರ್ಮ'ವೆಂದು ತಿಳಿದು ಯಾರನ್ನೂ ಟಾರ್ಗೆಟ್‌ ಆಗಿ ಮಾಡದೆ ಮನಸ್ಸನ್ನೊಂದು ಕ್ಷಣ ಖುಷಿಯಾಗಿಡುವ ತಿಳಿ ಹಾಸ್ಯದ ಝರಿ 'ನಕ್ಕು ಬಿಡಿ'ಯ ಉದ್ದಕ್ಕೂ ಹರಿಯುತ್ತದೆ. ಹಾಸ್ಯರತ್ನ ಡುಂಡಿರಾಜ್ ಅವರು ಈ ಕೃತಿಗೆ ಅಂದವಾದ ಬೆನ್ನುಡಿಯನ್ನು ಬರೆದಿದ್ದಾರೆ.

About the Author

ಎಚ್. ಶಾಂತರಾಜ್ ಐತಾಳ್
(03 June 1942)

ವಿನೋದ ಪ್ರವೃತ್ತಿಯ ಬರೆಹಗಾರ ಎಚ್. ಶಾಂತರಾಜ್ ಐತಾಳ್ ಅವರು ಮೂಲತಃ ಉಡುಪಿಯವರು. ಹುಟ್ಟಿದ್ದು 1942 ಜೂನ್‌ 03ರಂದು. ‘ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು, ವಿವಾಹ ಭೋಜನವಿದು’ ಅವರ ಲಲಿತ ಪ್ರಬಂಧ ಕೃತಿಗಳು. ಸುಹಾಸಂ ಹಾಸ್ಯಪ್ರಿಯರ ಮತ್ತು ಲೇಖಕರ ಸಂಘನೆಯ ಅಧ್ಯಕ್ಷರಾಗಿದ್ದಾರೆ. 2015ರಲ್ಲಿ ಅವರ ‘ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು’ ಕೃತಿಗೆ ಲಲಿತ ಪ್ರಬಂಧ ವಿಭಾಗದಲ್ಲಿ ಕನ್ನಡ ಪುಸ್ತಕ ಬಹುಮಾನ ಲಭಿಸಿದೆ.   ...

READ MORE

Related Books