ತಲೆಗೊಂದು ತರ ತರ

Author : ಶ್ರೀನಿವಾಸ ವೈದ್ಯ

₹ 90.00




Published by: ಅಂಕಿತ ಪುಸ್ತಕ

Synopsys

ಲೇಖಕ ಶ್ರೀನಿವಾಸ ವೈದ್ಯ ಅವರ ಹಾಸ್ಯ ಕೃತಿ ‘ತಲೆಗೊಂದು ತರ ತರ’. ಉತ್ತರ ಕರ್ನಾಟಕದ ಭಾಷೆಯ ಸೊಗಡಿನ ಅಪ್ಪಟ ಹಾಸ್ಯದುಂಬಿದ ಕೃತಿ ಇದು..ಹತ್ತು ಹದಿನೈದು ವರ್ಷಗಳ ಹಿಂದೆ 'ಅಪರಂಜಿ' ಮಾಸಪತ್ರಿಕೆಯೊಳಗ ಪ್ರಕಟಗೊಂಡ ಪುಸ್ತಕವಿದು..ಓದುಗ ತನ್ಮಯತೆಯೊಳಗ ಓದಿದಾಗ ಈಗೂ ಸಹಿತ ನಗೆ ಬುಗ್ಗೆ ಹರಿಸುವಂತೆ ಮಾಡುವ ಸರ್ವಕಾಲಕ್ಕೂ ಸಲ್ಲುವ ಬರಹ ಕೈಪಿಡಿ..

About the Author

ಶ್ರೀನಿವಾಸ ವೈದ್ಯ
(04 April 1936 - 21 April 2023)

ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣ ಗೊಳಿಸಿದರು. 1959ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರು ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ ಪಡೆದ ಪತ್ರಿಕೋದ್ಯಮ ಡಿಪ್ಲೊಮಾವನ್ನು ಪೂರೈಸಿದರು. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ...

READ MORE

Related Books