ಪಟ ಪಟ ಪಟಾಕಿ

Author : ಕು.ಗೋ. (ಹೆರ್ಗ ಗೋಪಾಲ ಭಟ್ಟ)

Pages 88

₹ 30.00




Year of Publication: 2008

Synopsys

ಲೇಖಕ ಕು.ಗೋ ಅವರ ’ಪಟ ಪಟ ಪಟಾಕಿ’ ಕೃತಿ ಹಾಸ್ಯ ಲೇಖನಗಳ ಸಂಕಲನವಾಗಿದೆ. ಈ ಪುಸ್ತಕವು ಈ ನಮ್ಮ ಯಾಂತ್ರಿಕ ಬದುಕಿನ ಮಧ್ಯೆ ಒಂದು ನಗೆಯ ಬಿಡುವನ್ನು ಸೃಷ್ಟಿಸುವ ಚುಟುಕು ಹಾಸ್ಯ ವಿಡಂಬನೆ, ಜೋಕು ಮುಂತಾದ ವೈವಿಧ್ಯಮಯ ಪುಟಗಳು ಇಲ್ಲಿವೆ ಇವನ್ನೆಲ್ಲ ಓದಿದಾಗ ನಮ್ಮ ಮಾನಸಿಕ ದೈಹಿಕ ಆರೋಗ್ಯ ವರ್ಧಿಸುವುದು. ಸಾಮಾಜಿಕ ಸರಸ ಸಂವಹನವನ್ನುವನ್ನು ತಣ್ಣಗೆ ಹುಟ್ಟುಹಾಕುತ್ತದೆ .

About the Author

ಕು.ಗೋ. (ಹೆರ್ಗ ಗೋಪಾಲ ಭಟ್ಟ)
(06 June 1938)

'ಕು. ಗೋ' ಎಂದೇ ಜನಪ್ರಿಯರಾಗಿರುವ ಲೇಖಕ ಹೆರ್ಗ ಗೋಪಾಲ ಭಟ್ಟರು ತಮ್ಮ ಪುಸ್ತಕ ಪ್ರೀತಿಗಾಗಿ ಹೆಸರಾದವರು. ಅವರನ್ನು ಕುರಿತು ’ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ’ ಎಂಬ ಗ್ರಂಥ ಪ್ರಕಟವಾಗಿದೆ. ಗೋಪಾಲ ಭಟ್ಟರು ಜನಿಸಿದ್ದು 1938 ರ ಜೂನ್ 6ರಂದು. ತಂದೆ ಅನಂತ ಪದ್ಮನಾಭ ಭಟ್ಟ ಮತ್ತು ತಾಯಿ ವಾಗ್ದೇವಿಯಮ್ಮ. ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯಮಟ್ಟದಲ್ಲಿ 37ನೇ Rank ಪಡೆದ ಅವರು ಮೈಸೂರಿನ ಯುವರಾಜ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮತ್ತು ಬಿ. ಎಸ್ಸಿ ಓದು ಕೈಗೊಂಡರು. ಕಾರಣಾಂತರಗಳಿಂದ ಅವರಿಗೆ ಬಿ. ಎಸ್ಸಿ ಪೂರ್ಣಗೊಳಿಸಲಾಗಲಿಲ್ಲ. ಉದ್ಯೋಗಕ್ಕೆ ಸೇರಿದ ನಂತರ ಅಂಚೆ ತೆರಪಿನ ಮೂಲಕ ...

READ MORE

Related Books