ಜಡಿಮಳೆ

Author : ಸಿ.ಎಂ.ಗೋವಿಂದರೆಡ್ಡಿ

Pages 108

₹ 75.00




Year of Publication: 2011
Published by: ಕಾಲ ಪ್ರಕಾಶನ, ಬೆಂಗಳೂರು
Address: Kaala Prakashana, No.23/A, 2nd Floor, 10th Cross, 1st N Block, Rajajinagar, Bangalore-560010
Phone: 9448587027

Synopsys

ನಕ್ಕು ಸುಮ್ಮನಾಗುವುದೇ ಕಾವ್ಯವಲ್ಲ! ಹಲವಾರು ಮಕ್ಕಳ ಕವನ ಸಂಕಲನಗಳನ್ನು ಪ್ರಕಟಿಸಿ ಈಗಾಗಲೇ ಪ್ರಸಿದ್ಧರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರ ‘ಜಡಿಮಳೆ’ ಸಂಕಲನದ ಹನಿಗವನಗಳನ್ನು ಮುನ್ನುಡಿಯ ನೆಪದಲ್ಲಿ ವಿಮರ್ಶಿಸುತ್ತ ಕೂರಲಾರೆ. ವಿಮರ್ಶಿಸುವಷ್ಟು ಪ್ರಬುದ್ಧತೆ ಅಥವಾ ವಿಮರ್ಶೆಯು ನನಗಿನ್ನೂ ದಕ್ಕಿಲ್ಲವೆಂದೇ ನನ್ನ ನಂಬಿಕೆ. ಹಾಗಾಗಿಯೇ ‘ನನ್ನ ಕಾಲದ’ ಸಾಹಿತ್ಯದ ಓದು ನನಗೆ ನಿರಾಳದ ಜೊತೆಗೆ ನಿರೀಕ್ಷೆಯನ್ನೂ ಉಳಿಸಿದೆ. ಹನಿಗವನವೆಂಬ ಪ್ರಕಾರದ ಸಮೃದ್ಧತೆಯೇ ಅದಕ್ಕಿರುವ ಜನಪ್ರಿಯತೆಯನ್ನು ತೋರಿಸುತ್ತದೆ.  ಹನಿಗವನದ ಕುರಿತಾದ ತಮ್ಮ ಅಭಿಪ್ರಾಯವನ್ನು ತಮ್ಮದೇ ಆದ ‘ನೋಟ’ ಎಂಬ ಹನಿಗವನದಲ್ಲಿ ಸಮರ್ಪಕವಾಗಿ ವ್ಯಕ್ತಪಡಿಸಿದ್ದಾರೆ. ಹನಿಗವನಗಳು ಹೊಂದಿರುವ ವಸ್ತುವಿನ ಆಧಾರದ ಮೇಲೆ ಅವುಗಳನ್ನು ವಿಭಾಗೀಕರಿಸುವುದು ಸುಗಮ ಓದಿಗೆ ಮತ್ತಷ್ಟು ಸಹಾಯವಾಗಿದೆ. ಎಲ್ಲ ಕವನಗಳೂ ಪ್ರಾಸಬದ್ಧವಾಗಿವೆ. ಮಕ್ಕಳ ಕವನಗಳನ್ನು ಬರೆಯುವುದಲ್ಲಿ ಪಳಗಿರುವ ಕಾರಣದಿಂದಲೋ ಏನೋ ಭಾಷೆ ಸರಳವೂ ಸುಂದರವೂ ಆಗಿ ಗಮನ ಸೆಳೆಯುತ್ತದೆ. ಪ್ರಾಸವಿದ್ದರೂ ಕೆಲವು ಹೇಳಿಕೆಯ ಮಟ್ಟದಲ್ಲೇ ನಿಂತುಬಿಡುತ್ತವೆ. ಅಲ್ಲಲ್ಲಿ ಇಂಗ್ಲೀಷ್ ಪದಗಳೂ ಇಣುಕಿ ಕನ್ನಡದ ಸದ್ಯದ ಹೊರಳನ್ನು ಅಥವಾ ಬೆಳವಣಿಗೆಯನ್ನು ಸೂಚಿಸುತ್ತವೆ. ತಮ್ಮ ವಿಡಂಬನೆ, ಮೊನಚು, ಪಂಚು, ನವಿರಾದ ಹಾಸ್ಯಗಳಿಂದ ನನ್ನ ಗಮನ ಸೆಳೆದ ಒಂದಷ್ಟು ಹನಿಗವನಗಳನ್ನು ಉದಾಹರಿಸುತ್ತ ವಿಶ್ಲೇಷಿಸುವುದು ಸಮಂಜಸವೆನಿಸುತ್ತದೆ.

 

 

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Related Books