ಸಂಸಾರದಲ್ಲಿ ಸ್ವಾರಸ್ಯ

Author : ಜ್ಯೋತ್ಸ್ನಾ ಕಾಮತ್

Pages 186

₹ 20.00




Year of Publication: 1992
Published by: ಪುಸ್ತಕಾಲಯ
Address: #746, 16ನೇ ಮುಖ್ಯ ರಸ್ತೆ, 37ನೇ ‘ಎಫ್’ ಕ್ರಾಸ್, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

Synopsys

`ಸಂಸಾರದಲ್ಲಿ ಸ್ವಾರಸ್ಯ’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ಹಾಸ್ಯಮಯ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ 18 ಅಧ್ಯಾಯಗಳಿದ್ದು, ಇವರು ಹೀಗೇನೇ, ಅಡಿಗೆ ಬಲ್ಲ ನಲ್ಲ, ಅತಿಥ್ಯ, ರಾವಣನನ್ನು ಮೋಹಿಸಿದ ಸೀತೆ, ಗುಜುರಿ ಗುತ್ತಿಗೆ, ಟೆಲಿಪೋನು ಬಂದಿತು, ವಾಕ್ ಚಾತುರ್ಯ, ರೇಡಿಯೋ ರಿಪೇರಿ, ರಾಯರಿಕಾನಾಮಿಕ್ಸ್, ತರಕಾರಿ ಖರೀದಿ, ತೂಕ ಕಡಿಮೆಮಾಡಿ, ಅಜ್ಞಾತವಾಸಿ, ಅನಾರೋಗ್ಯಧಾಮ, ಹೆಸರಿನ ಗೊಂದಲ, ಒಂದು ದಂತಕಂತೆ, ಕಲಹದ ಕಹಳೆ, ನಾನು ಮುದುಕಿಯೇ?, ಸಭಾಧ್ಯಕ್ಷ ಇವೆಲ್ಲವು ಈ ಕೃತಿಯಲ್ಲಿದೆ.

ಕೃತಿಗೆ ಮುನ್ನುಡಿ ಬರೆದಿರುವ ಚದುರಂಗ ಅವರು, ಜ್ಯೋತ್ಸ್ನಾ ಕಾಮತ್ ಅವರದು ಕನ್ನಡಕ್ಕೆ ವಿಶಿಷ್ಟವಾದ ಕೌಟುಂಬಿಕ ಹಾಸ್ಯ. ತಮ್ಮ ಮತ್ತು ತಮ್ಮ ಯಜಮಾನರ ದೌರ್ಬಲ್ಯಗಳನ್ನು ವಿಡಂಬಿಸುವ ರೀತಿ ! ಹೀಗೆ ತಮ್ಮ ಕುಟುಂಬವನ್ನೇ ಪರಿಹಾಸ್ಯಕ್ಕೆ ಗುರಿಮಾಡಬೇಕಾದರೆ ಮಹತ್ತರವಾದ ಮನಸ್ಥೈರ್ಯ ಇರಬೇಕಾಗುತ್ತದೆ. ಆ ಸ್ಥೈರ್ಯವನ್ನು ಲೇಖಕಿಯವರು ಅನುಪಮವಾಗಿ ಈ ಕೃತಿಯಲ್ಲಿ ಮೆರೆದಿದ್ದಾರೆ. ಜ್ಯೋತ್ಸಾ ಕಾಮತರು ಸೃಜಿಸಿರುವ ಲಘು ಹಾಸ್ಯ ಲೇಖನಗಳ ಪ್ರಸ್ತುತ ಕೃತಿ, ಸಮೀಚಿನ ಭೋಜನದಲ್ಲಿ ರುಚಿಕರ ವ್ಯಂಜನ, ಜಿದ್ದಿಗೆ ಅಪ್ಯಾಯಮಾನವಾಗುವಂತೆ ವಿಹ್ವಲ ಮನಸ್ಸಿಗೆ ಮುದ ನೀಡುತ್ತದೆ. ಈ ಕೃತಿಯಲ್ಲಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ನಿರಂತರವಾಗಿ ಸಂಭವಿಸುವ ಸನ್ನಿವೇಶಗಳು, ಘಟನೆಗಳು ಹಾಸ್ಯರಸದಲ್ಲಿ ಮಿಂದು ಮೈದಾಳಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಜ್ಯೋತ್ಸ್ನಾ ಕಾಮತ್
(24 January 1937 - 24 August 2022)

ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...

READ MORE

Related Books