ಮದುವೆ ಮಾರ್ಕೆಟ್ ಮತ್ತು ಇತರ ನಗೆ ಕತೆಗಳು

Author : ಎಂ.ಎಸ್. ನರಸಿಂಹಮೂರ್ತಿ

Pages 64

₹ 50.00




Year of Publication: 2019
Published by: ಅಂಕಿತ ಪುಸ್ತಕ
Address: #ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ ಬೆಂಗಳೂರು-560004
Phone: 26617100

Synopsys

‘ಮದುವೆ ಮಾರ್ಕೆಟ್ ಮತ್ತು ಇತರ ಕತೆಗಳು’ ಪುಸ್ತಕವು ಎಂ.ಎಸ್. ನರಸಿಂಹಮೂರ್ತಿ ಅವರ ಮೂರು ನಾಟಕಗಳ ಸಂಕಲನವಾಗಿದೆ. ಶಾಲಾ-ಕಾಲೇಜುಗಳಲ್ಲಿ ಮತ್ತು ಬೇರೆ ಬೇರೆ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾದ, ಖುಷಿ ಕೊಡುವ ನಗೆ ನಾಟಕಗಳನ್ನು ಇಲ್ಲಿ ಸಂಕಲಿಸಲಾಗಿದೆ. ಮಂಗಳ ದೀಪಾವಳಿ ವಿಶೇಷಾಂಕದಲ್ಲಿ ಈ ನಾಟಕಗಳು ಪ್ರಕಟವಾಗಿವೆ.

About the Author

ಎಂ.ಎಸ್. ನರಸಿಂಹಮೂರ್ತಿ
(20 October 1949)

ಹಾಸ್ಯ ಬರಹಗಾರ, ಬಾಷಣಕಾರ ಎಂ.ಎಸ್.ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1949 ಅಕ್ಟೋಬರ್ 20 ರಂದು ಜನಿಸಿದರು. ಕಾದಂಬರಿ, ಮಕ್ಕಳಸಾಹಿತ್ಯ, ವಿಚಾರ ಸಾಹಿತ್ಯ, ಹಾಸ್ಯ ಸಂಕಲನ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಇವರು ಇದುವರೆಗೆ 50 ಪುಸ್ತಕಗಳನ್ನು ಬರೆದಿದ್ದಾರೆ. 5000 ಕ್ಕೂ ಹೆಚ್ಚು ನಗೆ ಎಪಿಸೋಡ್‌ಗಳನ್ನು ರಚಿಸಿದ ರಾಷ್ಟ್ರೀಯ ದಾಖಲೆ ಅವರದು. 2000ಕ್ಕೂ ಹೆಚ್ಚು ಪ್ರಕಟಿತ ನಗೆ ಲೇಖನಗಳು, 100ಕ್ಕೂ ಹೆಚ್ಚು ಬಾನುಲಿ ನಾಟಕಗಳ ರಚನೆ.  ಸ್ವಯಂ ವಧು, ಶ್ರಮದಾನ, ಬಾಬ್ಬಿ, ಗೂಳಿಕಾಳಗ, ಕಂಡಕ್ಟರ್ ಕರಿಯಲಪ್ಪ, ವೈಕುಂಠಕ್ಕೆ ಬುಲಾವ್, ಕಿವುಡು ಸಾರ್ ಕಿವುಡು ಮತ್ತು ಇತರೆ ...

READ MORE

Related Books