ಬ್ರೇಕಿಂಗ್ ನ್ಯೂಸ್

Author : ಬಿ.ಎನ್. ಮಲ್ಲೇಶ್

Pages 186

₹ 200.00




Year of Publication: 2009
Published by: ಪ್ರಗತಿ ಗ್ರಾಫಿಕ್ಸ್ ಪ್ರಕಾಶನ
Address: . ಎಂ. ಭೈರೇಗೌಡ, #119, 3ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಹಂಪಿನಗರ, ಆರ್.ಪಿ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560 104 (
Phone: 08023409512

Synopsys

ಲೇಖಕ ಬಿ.ಎನ್. ಮಲ್ಲೇಶ್ ಅವರ ವಿನೋದ ಬರಹಗಳ ಸಂಕಲನ-ಬ್ರೇಕಿಂಗ್ ನ್ಯೂಸ್. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸತತ ನಾಲ್ಕು ವರ್ಷ ಕಾಲ ಅಂಕಣ ಬರಹಗಳಾಗಿ ಗಮನ ಸೆಳೆದಿವೆ. ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಹಾಸ್ಯ ವ್ಯಂಗ್ಯ, ವಿಡಂಬನಾ ದೃಷ್ಟಿಕೋನದಿಂದ ನೋಡುವುದು ಇಲ್ಲಿನ ಬರಹಗಳ ವೈಶಿಷ್ಟ್ಯ. 78 ಪುಟ್ಟ ಬರಹಗಳು ಈ ಪುಸ್ತಕದಲ್ಲಿವೆ. ಸಾಮಾನ್ಯ ಜನರ ಭಾವನೆಗಳನ್ನು ಯಥಾವತ್ತಾಗಿ ಪ್ರತಿ ಚಿತ್ರಿಸುವ ಆ ಮೂಲಕ ರಾಜಕಾರಣಿಗಳ ವಿಚಿತ್ರ ನಡಾವಳಿಗಳಿಗೆ ಸರಿಯಾದ ಚುಚ್ಚುಮದ್ದು ಕೊಡುವ ಕೆಲಸವನ್ನು ಈ ಬರಹಗಳು ಮಾಡಿವೆ. ಪ್ರತಿ ಬರಹದ ಕೊನೆಗೆ ಇರುವ ‘ಪಂಚ್’ ಬರಹಗಳ ಒಟ್ಟು ಗಟ್ಟಿತನವೂ, ಆಕರ್ಷಣೆಯೂ ಆಗಿದೆ. ಈ ಕೃತಿಗೆ 2010 ರ ' ಅಮ್ಮ ' ಪ್ರಶಸ್ತಿ ದೊರೆತಿದೆ. 

About the Author

ಬಿ.ಎನ್. ಮಲ್ಲೇಶ್

ಲೇಖಕ ಬಿ.ಎನ್. ಮಲ್ಲೇಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಬಡಗರಹಳ್ಳಿ ಗ್ರಾಮದವರು. ಆದರೆ, ದಾವಣಗೆರೆಯಲ್ಲಿ ವಾಸ. ವೃತ್ತಿಯಿಂದ ಪತ್ರಕರ್ತರು. ಎಂ.ಎ. ಎಲ್.ಎಲ್.ಬಿ ಪದವೀಧರರು. ದಾವಣಗೆರೆ ನಗರವಾಣಿ ದಿನಪತ್ರಿಕೆಯ ಸಹ ಸಂಪಾದಕರು. ಉದಯ ಟಿವಿಯ ಜಿಲ್ಲಾ (1998-2018) ವರದಿಗಾರರು. ದಾವಣಗೆರೆ ವಿಶ್ವವಿದ್ಯಾಲಯದ ಅಕಾಡೆಮಿ ಕೌನ್ಸಿಲ್ ಸದಸ್ಯರು.  ಕೃತಿಗಳು: ಬ್ರೇಕಿಂಗ್ ನ್ಯೂಸ್  (ವಿಡಂಬನೆ) ಮತ್ತು ತೆಪರೇಸಿ ರಿಟರ್ನ್ಸ್ (ವಿಡಂಬನಾತ್ಮಕ ಬರಹಗಳು)  ಬೇರು ಒಣಗಿದೆ ಪ್ರೀತಿ ಮತ್ತು ಟ್ರ್ಯಾಕುಗಳ ಮೇಲೆ ಹುಣ್ಣಿಮೆ ( ಕವನ ಸಂಕಲನಗಳು ) ಪ್ರಶಸ್ತಿ-ಗೌರವಗಳು: ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಗುಲಬರ್ಗಾದ ಅಮ್ಮ ಪ್ರಶಸ್ತಿ, ದಾವಣಗೆರೆಯಲ್ಲಿ ಮಹಾಲಿಂಗರಂಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.    ...

READ MORE

Related Books