
ಇತಿಹಾಸ ಸಂಶೋಧಕ, ಪ್ರಾಧ್ಯಾಪಕ, ಲೇಖಕ ಲ.ನ. ಸ್ವಾಮಿ ಅವರ ಕೃತಿ ʻಮೈಸೂರು ಸಂಸ್ಥಾನದ ರಾಜಕಾರ್ಯಧುರಂಧರ ವೆಂಕಾಮಾತ್ಯʼ. ಇತಿಹಾಸ ಹಾಗೂ ಸಾಹಿತ್ಯ ವಲಯದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿರುವ ವೆಂಕಪ್ಪಯ್ಯನವರ ಕುರಿತಾದ ಸಮಗ್ರ ಚಿತ್ರಣವನ್ನು ಪುಸ್ತಕ ನೀಡುತ್ತದೆ. ವೆಂಕಪ್ಪಯ್ಯನವರ ವೈಯಕ್ತಿಕ ಬದುಕು, ರಾಜತಾಂತ್ರಿಕ ನೈಪುಣ್ಯ, ಕನ್ನಡ ಸಂಸ್ಕೃತಗಳಲ್ಲಿನ ಅವರ ಸಾಹಿತ್ಯ ಸಾಧನೆ, ಅವರ ವಂಶದ ಹಿನ್ನೆಲೆ, ವಿವಿಧೆಡೆ ಇರುವ ಅವರ ಚಿತ್ರ-ಶಿಲ್ಪಗಳ ಗುರುತಿಸುವಿಕೆ, ಅವರ ಸ್ವಂತ ಊರಾದ ಅಕ್ಕಿರಾಮಪುರದ ವಿವರಗಳು, ಆ ಊರಿನ ಸ್ಥಳ ಪುರಾಣದ ಸಂಸ್ಕೃತ ಮೂಲ ಹಾಗೂ ಕನ್ನಡ ಭಾವನುವಾದಗಳು ಮುಂತಾದ ಮಾಹಿತಿಗಳನ್ನು ಅಧ್ಯಯನದ ಮೂಲಕ ಸ್ವಾಮಿ ಅವರು ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.