ಭಾರತ ಸಿಂಧು ರಶ್ಮಿ-೧

Author : ವಿ.ಕೃ. ಗೋಕಾಕ (ವಿನಾಯಕ)

Pages 576

₹ 425.00




Year of Publication: 2012
Published by: ಐಬಿಎಚ್ ಪ್ರಕಾಶನ
Address: 77, 2ನೇ ಮೇನ್, ರಾಮರಾವ್ ಲೇಔಟ್, ಬಿಎಸ್‌ಕೆ 3ನೇ ಹಂತ, ಬೆಂಗಳೂರು-560085

Synopsys

20ನೇ ಶತಮಾನದ ಮಹಾಕಾವ್ಯಗಳಲ್ಲಿ ವಿ.ಕೃ. ಗೋಕಾಕ ಅವರ ’ಭಾರತ ಸಿಂಧು ರಶ್ಮಿ’ ಮಹತ್ವದ ಕೊಡುಗೆಯೂ ಆಗಿದೆ. ಈ ಕಾಲದ ಮಹಾಕಾವ್ಯ. ಭಾರತ ಸಿಂಧು ರಶ್ಮಿ. ಭಾರತದ ಪ್ರಾಚೀನ ಭವ್ಯ ಇತಿಹಾಸ ಹಾಗೂ ವೇದಕಾಲೀನ ಭಾರತವನ್ನು ವಿಹಂಗಮವಾಗಿ ವಿಶ್ಲೇಷಿಸುತ್ತದೆ. ಈ ಕೃತಿಯು ಮಹಾಕಾವ್ಯದ ಮೊದಲ ಭಾಗವಾಗಿದೆ. ಈ ಮಹಾಕಾವ್ಯದಲ್ಲಿ 12 ಖಂಡಗಳು, 35 ಸಾವಿರ ಸಾಲುಗಳಿವೆ. ಋಗ್ವೇದ ಕಾಲದ ಜನಜೀವನವನ್ನು ವಿವರಿಸುತ್ತದೆ. ವಿಶೆಷವಾಗಿ ಮಹರ್ಷಿ ವಿಶ್ವಾಮಿತ್ರನ ವ್ಯಕ್ತಿತ್ವ ವಿವಿಧ ಆಯಾಮಗಳನ್ನು ಚರ್ಚಿಸುತ್ತದೆ. ವಮಹರ್ಷಿ ವಿಶ್ವಾಮಿತ್ರನೇ ಈ ಮಹಾಕಾವ್ಯದ ನಾಯಕ. ಕಾವ್ಯ ಚೇತನ ಹಾಗೂ ಸಾಮರಸ್ಯಗಳ ಗುಣಲಕ್ಷಣಗಳಿಗೆ ಈ ಮಹಾಕಾವ್ಯ ಉತ್ತಮ ಮಾದರಿ ನೀಡುತ್ತದೆ. ಸಪ್ತ ಕಿರಣಗಳು ಹಾಗೂ ಸಪ್ತ ಲೋಕಗಳ ವಿವರಣೆಯೂ ಹೃದಯಂಗಮವಾಗಿದೆ. ಈ ಮಹಾಕಾವ್ಯ ರವರೆಗೆ ವಿನಾಯಕರು ಮಾಡಿಕೊಂಡ ಸಿದ್ಧತೆಗಳ ವಿವರಣೆಯೂ ಕೃತಿಯ ವಿಶೇಷತೆಯನ್ನು ಹೆಚ್ಚಿಸಿ, ಓದುಗರಿಗೆ ಪ್ರೇರಣೆ ನೀಡುವಂತಿದೆ. 

ಋಗ್ವೇದದ ತತ್ವಗಳು, ಪೌರಾಣಿಕ ಕಾಲ್ಪನಿಕ ಸಾಮರ್ಥ್ಯ, ಆರ್ಯ-ದ್ರಾವಿಡ ಸಂಸ್ಕೃತಿಯ ಮಿಶ್ರಣ ಹಾಗೂ ಅದರಿಂದ ಉಂಟಾದ ಸಂಘರ್ಷ ಇತ್ಯಾದಿ ಭಾರತ ಸಿಂಧು ರಶ್ಮಿಯ ವಿಶೇಷ ವಸ್ತುವಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. 1991 ರಲ್ಲಿ ಇದೇ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಸಮಗ್ರ ಸಾಹಿತ್ಯಕ್ಕೆ (1969-1984 ಅವಧಿವರೆಗಿನ ಸಾಹಿತ್ಯ ಪರಿಗಣನೆ) ಜ್ಞಾನಪೀಠ ಪ್ರಶಸ್ತಿ ದೊರಕಿದೆ ಎಂದು ಆಯ್ಕೆ ಸಮಿತಿಯೇ ಸ್ಪಷ್ಟಪಡಿಸಿದೆ. ಈ ಪ್ರಶಸ್ತಿಯನ್ನು ದೆಹಲಿಯಲ್ಲೇ ನೀಡಲಾಗುತ್ತಿದೆ. ಆದರೆ, ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಸ್ವತಃ ಮುಂಬೈಗೆ ಬಂದು ಗೋಕಾಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು, ಗೋಕಾಕರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books