ಮಿಥಿಲೆಯ ವೀರವನಿತೆ ಸೀತೆ

Author : ಅಮೀಶ್ ತ್ರಿಪಾಠಿ

Pages 300

₹ 225.00




Year of Publication: 2018
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಲೇಖಕ ಅಮೀಶ್ ತ್ರಿಪಾಠಿ ಅವರು ರಾಮಚಂದ್ರ ಸರಣಿ-2ರ ಅಡಿ ಬರೆದ ಕೃತಿ-ಮಿಥಿಲೆಯ ವೀರವನಿತೆ ಸೀತೆ. ಭಾರತೀಯ ಸನಾತನ ಧರ್ಮ, ಪುರಾಣ, ಮಹಾಕಾವ್ಯಗಳು ಓದುಗರಿಂದ ಮರೆಯಾಗಬಾರದು ಎಂಬ ಸದುದ್ದೇಶದೊಂದಿಗೆ ಲೇಖಕರು ಧಾರ್ಮಿಕ ಚಿಂತನೆಯ ಇಂತಹ ಕೃತಿಗಳನ್ನು ರಚಿಸುತ್ತಲೇ ಇದ್ದಾರೆ. ಮೂರು ಕೃತಿಗಳ ‘ಶಿವ ಸರಣಿ’(ಶಿವಾಸ್ ಟ್ರಯಾಲಜಿ)ಯಿಂದ ಪ್ರಸಿದ್ಧರಾದ ಲೇಖಕರು ಈಗ ರಾಮಚಂದ್ರ ಎಂಬ ಸರಣಿ ಆರಂಭಿಸಿ, ಅದರ 2ನೇ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಈ ಕೃತಿಯ ಮೂಲ ‘ಸೀತಾ: ವಾರಿಯರ್ ಆಫ್ ಮಿಥಿಲಾ’. ಮೃದು ಸ್ವಭಾವದ ಸೀತೆಯನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡಿರುವ ಭಾರತೀಯರಿಗೇ ಅಚ್ಚರಿಯೆನ್ನುವಂತೆ ‘ಸೇನಾನಿ’ ಸೀತೆಯನ್ನು ಪರಿಚಯಿಸಿದ್ದಾರೆ. ಸೀತೆಯ ಈ ಗುಣಗಳನ್ನು ಕಾಲ್ಪನಿಕವಾಗಿ ಸೃಷ್ಟಿಸದೇ ಪುರಾಣದ ಪುಸ್ತಕಗಳಿಂದಲೇ ಅಮೀಶ್ ಹೊರತೆಗೆದಿದ್ದಾರೆ ಎಂಬುದು ವಿಶೇಷ. ಹೀಗಾಗಿ, ಮಹಾಕಾವ್ಯಗಳ ಕಥೆ ಒಂದೇ ಆದರೂ, ಅವನ್ನು ನೋಡುವ ದೃಷ್ಟಿಕೋನದ ವಿಶೇಷತೆಯಿಂದ ಈ ಕೃತಿ ಗಮನ ಸೆಳೆಯುತ್ತದೆ.

About the Author

ಅಮೀಶ್ ತ್ರಿಪಾಠಿ
(18 October 1974)

ಅಮೀಶ್ ತ್ರಿಪಾಠಿ ಅವರು ಲೇಖಕರು. ಮುಂಬೈ ಮೂಲದವರು. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಪದವೀಧರರು. ಕಾಲ್ಪನಿಕ ಕಥೆಗಳನ್ನು ಬರೆಯುವುದರಲ್ಲಿ ಪರಿಣಿತರು. ಶಿವ, ನಂದಿ, ಸತಿ, ವೀರಭದ್ರ, ದಕ್ಷ ಹೀಗೆ ಇಂತಹ ಪುರಾಣಗಳ ಇಂತಹ ಹೆಸರಗಳನ್ನು ಬಳಸಿ ಅವರು ವಿನೂತನ ಮಾದರಿಯಲ್ಲಿ ಕಟ್ಟಿಕೊಟ್ಟ ಕಥೆಗಳು ಭಾರತೀಯ ವಿವಿಧ ಭಾಷೆಗಳಿಗೂ ಅನುವಾದವಾಗಿವೆ. ಶಿವ ಕುರಿತಂತೆ ಬರೆದ ಇವರನ್ನು ಪ್ರಸಿದ್ಧಿ ತಂದ ಸರಣಿಯಾಗಿದೆ. ಇವರ ಇಮ್ಮಾರ್ಟಲ್ಸ್ ಆಫ್ ಮೆಲುಹ ಕೃತಿಯು 12 ಭಾಷೆಗಳಲ್ಲಿ, ಸೀಕ್ರೆಟ್ ಆಫ್ ದಿ ನಾಗಾಸ್-7 ಭಾಷೆಗಳಲ್ಲಿ ಹಾಗೂ ಓತ್ ಆಫ್ ದಿ ವಾಯುಪುತ್ರಾಸ್ ...

READ MORE

Related Books