ಉದ್ಯೋಗ ಪರ್ವ ಸಂಗ್ರಹ

Author : ತ.ಸು. ಶಾಮರಾಯ

Pages 138

₹ 60.00




Year of Publication: 2008
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: # 9, 'ರಮ್ಯ', ಗೋಕುಲಂ, 3ನೆಯ ಹಂತ, ಮೈಸೂರು.
Phone: 9880749412

Synopsys

ಕನ್ನಡ ಮಹಾಭಾರತ: ಉದ್ಯೋಗ ಪರ್ವ ಸಂಗ್ರಹ-ಈ ಕೃತಿಯನ್ನು ಖ್ಯಾತ ಲೇಖಕ ಡಾ. ತ.ಸು. ಶಾಮರಾಯರು ಸಂಗ್ರಹಿಸಿದ್ದು, ಉದ್ಯೋಗ ಪರ್ವದಲ್ಲಿಯ ಮಹತ್ವದ ಅಂಶಗಳನ್ನು ಸಂಗ್ರಹಿಸಿ, ಸರಳ ಭಾಷೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ಮಹಾಭಾರತ ಕಾವ್ಯದ ಮಹತ್ವದ ಈ ಪರ್ವದ ವಿವರಗಳು ಇಲ್ಲಿವೆ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಐದನೆಯದು ಈ ಉದ್ಯೋಗ ಪರ್ವ. ಇಲ್ಲಿ 10 ಉಪ ಪರ್ವಗಳು, 198 ಅಧ್ಯಾಯಗಳನ್ನು ಒಳಗೊಂಡಿದೆ. ಪಾಂಡವರ ವನವಾಸ ಮುಗಿದ ತಕ್ಷಣ ಮತ್ತು ನಂತರದ ಅವಧಿಯನ್ನು ಈ ಉದ್ಯೋಗ ಪರ್ವವು ವಿವರಿಸುತ್ತದೆ.

About the Author

ತ.ಸು. ಶಾಮರಾಯ
(12 June 1906 - 21 August 1998)

ತ.ಸು.ಶಾಮರಾಯರು ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು. ಇವರು (12-06-1906) ಜನಿಸಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಕುವೆಂಪು ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿ ಪಡೆದು, ಪ್ರಾಧ್ಯಾಪಕ ವೃತ್ತಿ ಕೈಗೊಂಡರು. ಮೈಸೂರು ವಿ.ವಿ. ಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು, ಕನ್ನಡ ನಾಟಕ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ವಿಮರ್ಶಾ ಗ್ರಂಥಗಳು, ಅಜಿತ ಪುರಾಣ ಸಂಗ್ರಹ, ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ 11 ಕಾವ್ಯ ಸಂಗ್ರಹಗಳು), ಮಂಕನ ಮಡದಿ ...

READ MORE

Related Books