ಅಭಿಮನ್ಯು

Author : ಎನ್‌. ಶ್ರೀನಿವಾಸ ಉಡುಪ

Pages 110

₹ 15.00




Year of Publication: 1972
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಅಭಿಮನ್ಯು' ಮಹಾಭಾರತದ ಒಂದು ಪಾತ್ರ.. ಈ ಪಾತ್ರದ ಚಿತ್ರಣ ನೀಡುವ ಕೃತಿ ಇದು. ಲೇಖಕ ಶ್ರೀನಿವಾಸ ಉಡುಪ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ವೀರಪುರುಷ ಅಭಿಮನ್ಯುವಿನ ಕುರಿತಾಗಿ ಅತಿರಥ ಮಹಾರಥರ ಗಾಥೆಯಾದ ಮಹಾಭಾರತದಲ್ಲಿ ಕಣ್ಣು ಕೋರೈಸುವ  ಸಿಡಿಲಮರಿ; ಘನಘೋರ ಕುರುಕ್ಷೇತ್ರ ಯುದ್ಧದಲ್ಲಿ ಕೌರವಸೇನೆಯ ಚಂಡಪ್ರಚಂಡ ಸೇನಾನಿಗಳನ್ನೆಲ್ಲ ಹಣ್ಣುಗಾಯಿ ನೀರುಗಾಯಿ ಮಾಡಿ, ಕಡೆಗೆ ಕುಟಿಲತೆಗೆ ಬಲಿಯಾದ ಮೀಸೆಯೂ ಮೂಡದ ಸಿಂಹಶಿಶು ಎಂದು ಲೇಖಕರು ವರ್ಣಿಸಿದ್ದಾರೆ. ಶತ್ರುಗಳ ಯಾವುದೇ ಭಯವಿಲ್ಲದ ಅಭಿಮನ್ಯು ಚಕ್ರವ್ಯೂಹ ಭೇದಿಸಲು ಯಾವ ರೀತಿ ವೀರಾವೇಷದಿಂದ ಹೊರಾಡಿದನು ಮತ್ತು ತನ್ನ ಪ್ರಾಣವನ್ನೂ ಲೆಕ್ಕಿಸದೆ ಶತ್ರುಗಳನ್ನು ಸದೆಬಡಿದು ಕೊನೆಗೆ ಅದೇ ಶತ್ರುಗಳು ಮೋಸದಿಂದ ಅಭಿಮನ್ಯುವನ್ನು ಕೊಂದ ಬಗೆಯನ್ನು ಲೇಖಕರು ಇಲ್ಲಿ ಸರಳ ಭಾಷೆಯಲ್ಲಿ ಪ್ರಸ್ತುತಪಡಿಸಿದ್ದಾರೆ.

About the Author

ಎನ್‌. ಶ್ರೀನಿವಾಸ ಉಡುಪ

ತಮ್ಮ ಅನನ್ಯ ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದವರು ಎನ್‌. ಶ್ರೀನಿವಾಸ ಉಡುಪ. ಅವರು 1935 ಆಗಸ್ಟ್‌ 15ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಎನ್‌. ವೆಂಕಟೇಶ ಉಡುಪ, ತಾಯಿ ಮಹಾಲಕ್ಷ್ಮಿ. ತಮ್ಮ ವಿದ್ಯಾಭ್ಯಾಸದ ನಂತರ ತುಂಗಾ ಕಾಲೇಜಿನಲ್ಲಿ ದೀರ್ಘ ಕಾಲ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ‘ಪಾಪು ಪದ್ಯಗಳು, ಕನ್ನಡ ನಾಡಿನ ಕೂಸುಮರಿ, ಕುಂಭಕರ್ಣನ ನಿದ್ದೆ’ ಅವರ ಮಕ್ಕಳ ಕವನ ಸಂಕಲನಗಳಾಗಿದ್ದು ‘ಹಿಡಿಂಬನ ತೋಟ, ಬೆರಳುಗಳು’ ಹೀಗೆ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ‘ಗೂಬಜ್ಜಿಯ ...

READ MORE

Related Books