ಶ್ರೀರಾಮಚರಿತವು ಅಯೋಧ್ಯಾಕಾಂಡವು

Author : ಸಾಲಿ ರಾಮಚಂದ್ರರಾಯ

Pages 131




Year of Publication: 1935
Published by: ವಾಮನ ರಾಮಚಂದ್ರ ಮಧೋಳಕರ್
Address: ಸಾಹಿತ್ಯ ಸೇವಾ ಸಮಿತಿ, ಕರ್ನಾಟಕ ಹೈಸ್ಕೂಲ್ ಧಾರವಾಡ

Synopsys

ಶ್ರೀ ರಾಮಚರಿತೆಯ ಅಯೋಧ್ಯಾಕಾಂಡದ ಪೂರ್ವಾರ್ಧ ಭಾಗವನ್ನು ಲೇಖಕ ಸಾಲಿ ರಾಮಚಂದ್ರರಾಯರು ಬರೆದ ಕೃತಿಯೇ-ಅಯೋಧ್ಯಾಕಾಂಡವು. ಶ್ರೀರಾಮಚಂದ್ರರ ಉದಾತ್ತ ಜೀವನದ ಸೊಗಸು ಲೇಖಕರ ನವಿರಾದ ಶೈಲಿಯಿಂದ ಮತ್ತಷ್ಟು ಹೊಳಪು ಬಂದಿದೆ ಎಂದು ಮುನ್ನುಡಿ ಬರೆದ ಎ.ಟಿ. ಸಾಸನೂರು ಅಭಿಪ್ರಾಯಪಟ್ಟಿದ್ದಾರೆ.

About the Author

ಸಾಲಿ ರಾಮಚಂದ್ರರಾಯ
(10 October 1888 - 31 October 1978)

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ...

READ MORE

Related Books