ಮಹಾಭಾರತ

Author : ದೇವುಡು ನರಸಿಂಹಶಾಸ್ತ್ರಿಗಳು

Pages 500

₹ 300.00




Year of Publication: 2020
Published by: ಟಿ ಎನ್ ಕೃಷ್ಣಯ್ಯಶೆಟ್ಟಿ ಅಂಡ್ ಸನ್ಸ್
Address: # 234, ಬಿ.ಕೆ.ಜಿ. ಸಂಕೀರ್ಣ, ಚಿಕ್ಕಪೇಟೆ, ಬೆಂಗಳೂರು-560053
Phone: 0802225 8217

Synopsys

ಹಿರಿಯ ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರು ರಚಿಸಿದ ಕೃತಿ-ಭಗವಾನ್ ವೇದವ್ಯಾಸ ವಿರಚಿತ ಮಹಾಭಾರತ: 18 ಪರ್ವಗಳು. ಈವರೆಗೆ ಸಾಕಷ್ಟು ಮಹಾಭಾರತಗಳು ಕೃತಿ ರೂಪದಲ್ಲಿ ಬಂದಿವೆ. ಆದರೆ, ಪಾತ್ರ-ಸನ್ನಿವೇಶಗಳಿಗೆ ಆದ್ಯತೆ ನೀಡಿದ್ದರಿಂದ ಸ್ವಲ್ಪ ಬದಲಾವಣೆ ಕಂಡಿದ್ದರೂ ಮೂಲ ಕಥೆಗೆ ಧಕ್ಕೆ ಬಂದಿಲ್ಲ. ಸಂಸ್ಕೃತದಲ್ಲಿಯ ಈ ಸಾಹಿತ್ಯವನ್ನು ಲೇಖಕರು ಸರಳವಾಗಿ ಕನ್ನಡದ ಗದ್ಯಕ್ಕೆ ರೂಪಾಂತರಿಸಿದ್ದು, ಈ ಕೃತಿಯ ವೈಶಿಷ್ಟ್ಯ.

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Related Books