ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ

Author : ಎಂ. ವೀರಪ್ಪ ಮೊಯ್ಲಿ

Pages 572

₹ 700.00




Year of Publication: 2018
Published by: ಮಾಹೇಶ್ವರೀ ಪ್ರಕಾಶನ
Address: ನಂ.1, ಆರ್.ಟಿ. ನಗರ, ಬೆಂಗಳೂರು- 560032
Phone: 08023334784

Synopsys

‘ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ’ ಡಾ.ಎಂ. ವೀರಪ್ಪ ಮೊಯಿಲಿ ಅವರು ರಚಿಸಿರುವ ಪೌರಾಣಿಕ ಗ್ರಂಥ. ಈ ಕೃತಿಗೆ ಪ್ರೊ.ಜಯಕುಮಾರ್ ಉಪಾಧ್ಯೆ, ಪ್ರೊ. ಷ. ಶೆಟ್ಟರ್, ಡಾ.ಹಂಪನಾ, ಬಿ.ಎ. ವಿವೇಕ ರೈ ಸೇರಿದಂತೆ ಮಹತ್ವದ ಲೇಖಕರು ಬೆನ್ನುಡಿ ಬರೆದಿದ್ದಾರೆ. ಹತ್ತನೆಯ ಶತಮಾನದಲ್ಲಿ ಆಗಿಹೋದ ಹೇಮಾಹೇಮಿಗಳನ್ನು ಈ ಕಾವ್ಯದ ಪ್ರಮುಖ ಪಾತ್ರಗಳನ್ನಾಗಿಸಿ ಕನ್ನಡನಾಡಿನ ಚರಿತ್ರೆಯ ಜೀವತುಂಬಿ, ಆ ಅವಧಿಯ ಸಾಂಸ್ಕೃತಿಕ ಲೋಕವನ್ನು ಲೀಖಕ ಮೊಯಿಲಿ ಅವರು ಅನಾವರಣಗೊಳಿಸಿದ್ದಾರೆ ಎಂದು ಡಾ. ಹಂಪನಾ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಇತಿಹಾಸ ತಜ್ಞ ಪ್ರೊ.ಷ. ಶೆಟ್ಟರ್ ಅವರು ಈ ಕೃತಿಯ ಬಗ್ಗೆ ಬರೆಯುತ್ತಾ ‘ಮೊಯಿಲಿ ಅವರು ಜೈನರ ಜನನ-ಮರಣ ಸಂಹಿತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು, ಜೈನಪಾರಿಭಾಷಿಕ ಪದಗಳಾದ ಸಲ್ಲೇಖನ, ಆರಾಧನಾ, ಸಮವಸರಣ, ಮಾನಸ್ತಂಭ, ಕಾರ್ಯೋತ್ಸರ್ಗ, ಕೇವಲತ್ವ ಮುಂತಾದವುಗಳನ್ನು ಸಂದರ್ಭೋಚಿತವಾಗಿ ಬಳಸಿರುವುದನ್ನು ಕಾಣಬಹುದು’ ಎನ್ನುತ್ತಾರೆ. ಈ ಸಂಪೂರ್ಣ ಮಹಾಕಾವ್ಯದ ಅಂಗೀರಸ ಶಾಂತರಸವಾಗಿದೆ. ಪ್ರಸಂಗಾನುಸಾರವಾಗಿ ಲೋಕಪ್ರಸಿದ್ಧ ಕಥೆಗಳನ್ನು ಸಮಾವೇಶಮಾಡಿ ಧರ್ಮೋಪದೇಶದ ಮೂಲಕ ಭೋಗದಿಂದ ತ್ಯಾಗದ ಕಡೆಗೆ ಕೊಂಡೊಯ್ಯುವ ಪ್ರಯತ್ನ ಸಾರ್ಥಕವಾಗಿದೆ ಎಂಬುದು ಪ್ರೊ. ಜಯಕುಮಾರ್ ಉಪಾಧ್ಯೆ ಅವರ ಅಭಿಪ್ರಾಯ. ಈ ಮಹಾಕಾವ್ಯಕ್ಕೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

About the Author

ಎಂ. ವೀರಪ್ಪ ಮೊಯ್ಲಿ
(12 January 1940)

ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ವೀರಪ್ಪ ಮೊಯ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಂದೆ- ತಮ್ಮಯ್ಯ ಮೊಯ್ಲಿ, ತಾಯಿ ಪೂವಮ್ಮ. ಪ್ರಾಥಮಿಕ ಶಿಕ್ಷಣ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮೂಡಬಿದರೆಯಲ್ಲಿ ಪೂರೈಸಿ, ಮಂಗಳೂರು ಸರಕಾರಿ ಕಾಲೇಜಿನಲ್ಲಿ ಪದವಿ, ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆ ಹಾಗೂ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಪದವಿ ಪಡೆದಿದ್ದಾರೆ. ಕಾರ್ಕಳ ಹಾಗೂ ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನಾರಂಭಿಸಿದ ನಂತರದಲ್ಲಿ ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿದ್ದರು. 1968ರಲ್ಲಿ ಕಾಂಗ್ರೆಸ್ ಸದಸ್ಯರಾಗಿ, 1969ರಲ್ಲಿ ಕಿಸಾನ್ ಸಭಾ ಸ್ಥಾಪಿಸಿದರು. 1972ರಿಂದ 1999ರವರೆಗೆ ಮೊಯ್ಲಿಯವರೆಗೆ ...

READ MORE

Awards & Recognitions

Related Books