ಮಹಾಕಾವ್ಯಗಳಲ್ಲಿ ಮನಸೆಳೆವ ಪ್ರಸಂಗಗಳು

Author : ಬಿ.ಜಿ. ಕುಸುಮಾ

Pages 104

₹ 80.00




Year of Publication: 2015
Published by: ವಿಕಾಸ ಪ್ರಕಾಶನ
Address: #1541, 16ನೇ ಮುಖ್ಯರಸ್ತೆ, ಎಮ್.ಸಿ. ಲೇಔಟ್‌, ವಿಜಯನಗರ ಬೆಂಗಳೂರು-560040.
Phone: 9900095204

Synopsys

ಮಹಾಕಾವ್ಯಗಳಲ್ಲಿ ಮನಸೆಳೆವ ಪ್ರಸಂಗಗಳು-ಇದು ವಿಮರ್ಶನಾತ್ಮಕ ಬರಹಗಳ ಕೃತಿ. ಲೇಖಕಿ ಬಿ.ಜಿ. ಕುಸುಮಾ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಮಾನವ ಅವಭಾವದ ಅನಾವರಣ, ಮಹಾಭಾರತದ ಮದುವೆಗಳು, ಮಹಾಭಾರತದ ನುಡಿಚಿತ್ರಗಳು, ಮಹಾಭಾರತಗಳ ಕರ್ಣ, ಮೊದಲ ರಣಕಹಳೆ ಮೊಳಗಿಸಿದ ಮಹಿಳೆ, ಅಹಲ್ಯಾ ಶಾಪ ವಿಮೋಚನೆ, ಪಾದುಕಾ ಕೀರೀಟಿ, ಲಂಕಾ ದಹನ, ಕುವೆಂಪು ಕುಂಚದಲ್ಲಿ ಶಬರಿ ಅಧ್ಯಾಯಗಳನ್ನು ಒಳಗೊಂಡಿದೆ. ಸಂಗೀತ ಕೇಳುವುದರಲ್ಲಿ ಆಸಕ್ತಿಯಿದ್ದ ನನಗೆ ಗಮಕಕಲಾ ಪ್ರಪಂಚಕ್ಕೆ ಅತ್ಯಂತ ಆಕಸ್ಮಿಕವಾಗಿ ಪ್ರವೇಶ ಲಭಿಸಿತು. ಇದಕ್ಕೆ ಕಾರಣರಾದವರು ದಿವಂಗತ ಇಂದಿರಾ ವೆಂಕಟೇಶ್ ಅವರು, ಅವರ ಮೂಲಕ ಗಮಕಿ ಗಂಗಮ್ಮ ಕೇಶವಮೂರ್ತಿ ಅವರ ಪರಿಚಯವಾಯಿತು. ಅವರಂತೂ ಅತ್ಯಂತ ನಾಟಕೀಯವಾಗಿ ನನ್ನನ್ನು ವ್ಯಾಖ್ಯಾನದ ವೇದಿಕೆಗೆ ಹತ್ತಿಸಿಬಿಟ್ಟರು. ಮುಂದೆ ನಿರಂತರವಾಗಿ ಆ ವೇದಿಕೆಯ ಮೇಲೆ ನನ್ನನ್ನು ಸ್ಥಾಪಿಸಿದವರು ಗಮಕಿ ಶೋಭಾ ಶಶಿಧರ್‌ ಎಂದು ಲೇಖಕಿ ಕೃತಿಯ ಕುರಿತು ಬರೆದಿದ್ದಾರೆ.

About the Author

ಬಿ.ಜಿ. ಕುಸುಮಾ

ಲೇಖಕಿ ಬಿ.ಜಿ. ಕುಸುಮಾ ಅವರಿಗೆವಿಜ್ಞಾನ ಶಿಕ್ಷಣದಲ್ಲಿ ಅತೀವ ಶ್ರದ್ಧೆ ಮತ್ತು ಕಲೆಯಲ್ಲಿ ಅಪಾರ ಆಸಕ್ತಿ. ಇವೆರಡರ ಸಾಂಗತ್ಯಕ್ಕೆ ಅವರ ವ್ಯಕ್ತಿತ್ವ. ಲೋಕದ ಆಗುಹೋಗುಗಳನ್ನು ವೈಚಾರಿಕ ದೃಷ್ಟಿಕೋನದಿಂದ ವಿಶ್ಲೇಷಿಸುವ, ಸಾಹಿತ್ಯ, ಸಂಗೀತ, ಗಮಕ ಇವುಗಳನ್ನು ಆಸ್ವಾದಿಸುವ ಸಂವೇದನೆ ಇವೆರಡರ ಹದವರಿತ ಮಿಶ್ರಣ ಇವರಲ್ಲಿ ಹಾಸುಹೊಕ್ಕಾಗಿದೆ. ಕಳೆದ 25 ವರ್ಷದಿಂದ ಬೆಂಗಳೂರಿನಲ್ಲಿ ಮಕ್ಕಳಿಗೆ ಬೇಸಿಗೆ ವಿಜ್ಞಾನ ಶಿಬಿರಗಳನ್ನು ನಿರಂತರ ನಡೆಸುತ್ತಾ ಬಂದಿದ್ದಾರೆ. ಪ್ರಸಿದ್ಧ ಗಮಕಿಗಳ ಕಾವ್ಯವಾಚನಕ್ಕೆ ವ್ಯಾಖ್ಯಾನ ಮಾಡುತ್ತಾರೆ. . ವಯಸ್ಸು 80 ದಾಟದ್ದರೂ ಜೀವನೋತ್ಸಾಹ ಕುಗ್ಗಿಲ್ಲ. ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ, ಮಹಿಳೆಯರ ಆರೋಗ್ಯ ರಕ್ಷಣೆಗೆ ಸ್ಪಂದಿಸಲು ಸಾಮಾಜಿಕ ಸೇವಾ ಟ್ರಸ್ಟ್ ಸ್ಥಾಪಿಸಿದ್ದಾರೆ. ಅವರ ಬಹುಮುಖ ಆಸಕ್ತಿಗೆ ...

READ MORE

Related Books