
ಲೇಖಕ ಅಂಶಿ ಪ್ರಸನ್ನ ಕುಮಾರ ಅವರ ಕೃತಿ-ಮೈಸೂರು ರಾಜರು ಮತ್ತು ದಸರಾ. ನವರಾತ್ರಿಯ ದಸರಾ ಮೂಲಕ ಮೈಸೂರು ಪ್ರಸಿದ್ಧಿಗೆ ಬಂದಿದೆ. ಮೈಸೂರು ದೊರೆಗಳು ಈ ಹಬ್ಬವನ್ನು ಆಚರಿಸುತ್ತಾ ಬಂದರು. ತದನಂತರ, ಸರ್ಕಾರಿ ಉಸ್ತುವಾರಿಯಲ್ಲಿ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಜಗತ್ತಿನ ಅನಾವರಣವಾಗುತ್ತಾ ಬಂದಿತ್ತು. ಇಂದಿಗೂ ಅದು ಮುಂದುವರಿದಿದೆ. ರಾಷ್ಟ್ರೀಯ ಮಟ್ಟದಲ್ಲೂ ಇಲ್ಲಿಯ ಬಹುತೇಕ ಕಲೆಗಳು ದಸರಾ ಉತ್ಸವದ ಮೂಲಕವೇ ಗಮನ ಸೆಳೆದಿವೆ. ಹೀಗಾಗಿ, ಮೈಸೂರು ರಾಜರು ಪರಂಪರೆ, ಆಡಳಿತ ವೈಖರಿ, ದಸರಾ ಹಬ್ಬದ ಮಹತ್ವ ಇತ್ಯಾದಿ ಅಂಶಗಳನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.