
ಕಲ್ಪನಾ ಸಾಗರರ ಜೀವನ ಪ್ರೀತಿಯ ಬರಹಗಳ ಸಂಕಲನವೇ 'ಬದುಕಿಗೊಂದು ಭರವಸೆ'. 'ತ್ರಿಮೂರ್ತಿಗಳ ಸಂಗಮವೇ ತಾಯಿ' ಲೇಖನದಲ್ಲಿ ವಿಜ್ಞಾನಿ ಥಾಮಸ್ ಎಡಿಸನ್ ಹೇಗೆ ತಾಯಿಯ ನೆರವಿನಿಂದ ಮಹಾ ವಿಜ್ಞಾನಿಯಾದ ಎಂಬ ವಿವರಣೆ ಇದೆ. ’ನಮ್ಮ ಕರ್ಮಫಲ ನಮ್ಮದೇ’ ಬರಹ ಬೇಡ ವಾಲ್ಮೀಕಿಯಾಗಿ ಬದಲಾದ ಪ್ರಸಂಗವನ್ನು ವಿವರಿಸುತ್ತದೆ. 'ದಿನಚರಿ ಮರೆಯದ ಗೃಹಿಣಿ' ಹೆಣ್ಣಿನ ತ್ಯಾಗಮಯ ಬದುಕನ್ನು ಕಟ್ಟಿಕೊಡುತ್ತದೆ. 'ಪ್ಯಾಪಿಯೋನ್' ನ ಕತೆ ದಾಸ್ಯದ ಶೃಂಖಲೆಯಿಂದ ಹೊರಬಂದ ಅದಮ್ಯ ಉತ್ಸಾಹಿಯೊಬ್ಬನ ಜೀವನಗಾಥೆಯ ಸಂಕೇತದಂತಿದೆ. ಶಿಲ್ಪಿ ಮತ್ತು ಕಲ್ಲಿನ ಸಂಬಂಧವನ್ನು ಮನೋಜ್ಞವಾಗಿ ವಿವರಿಸುವ ಲೇಖನ ’ತೀರದ ಬಯಕೆಗಿಂತ ಏನಿದೆಯೋ ಅದೇ ಉತ್ತಮ’. ಇಂತಹ 41 ಲೇಖನಗಳ ಮೂಲಕ ಕೃತಿ ಗಮನ ಸೆಳೆಯುತ್ತದೆ.
©2025 Book Brahma Private Limited.