ಬದುಕಿಗೊಂದು ಸಂಹಿತೆ

Author : ಪಿ.ಎಸ್. ರಾಮಾನುಜಂ

Pages 176

₹ 80.00




Year of Publication: 2003
Published by: ರವಿ ಪ್ರಕಾಶನ
Address: 169, 5ನೇ ಮುಖ್ಯರಸ್ತೆ, ಬಿಸಿಸಿ ಲೇಔಟ್, ವಿಜಯನಗರ 2ನೇ ಹಂತ, ಬೆಂಗಳೂರು- 560040
Phone: 0803395871

Synopsys

‘ಬದುಕಿಗೊಂದು ಸಂಹಿತೆ’ ಲೇಖಕ ಪಿ.ಎಸ್. ರಾಮಾನುಜಂ ಅವರ ಕೃತಿ. ಪ್ರಾಚೀನ ಭಾರತದ ಚಿಂತನಗಳೆಂದರೆ ಕೇವಲ ಆಧ್ಯಾತ್ಮಿಕ ಚಿಂತನೆಗಳೇ ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ, ಆಧ್ಯಾತ್ಮಿಕ ವಿಚಾರಗಳಲ್ಲದೆ ಲೌಕಿಕ ಜೀವನಕ್ಕೆ ಬೇಕಾದ ಅಂದರೆ ಇಹೋಪಯೋಗಿಯಾದ, ಯಶಸ್ವೀ ಜೀವನವನ್ನು ಕಲಿಸುವ ವಿಚಾರಧಾರೆಯು ಸಮಾನಾಂತರವಾಗಿ ಪ್ರಾಚೀನ ಸಾಹಿತ್ಯವನ್ನು ವ್ಯಾಪಿಸಿಕೊಂಡಿದೆ. ಪರದಷ್ಟೇ ಇಹವೂ ಭಾರತೀಯ ಮನಸ್ಸನ್ನು ಆಕ್ರಮಿಸಿತ್ತು ಎಂಬ ವಿಷಯ ಈ ಚಿಂತನೆಗಳನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಈ ವಿಚಾರಗಳು ಸಂಸ್ಕೃತದಲ್ಲಿ ಸುಭಾಷಿತಗಳ ರೂಪದಲ್ಲಿ ನಯಶಾಸ್ತ್ರ ಮುಂತಾದ ಜ್ಞಾನ ಶಾಖೆಗಳ ಗ್ರಂಥಗಳಲ್ಲಿ, ಕಾವ್ಯನಾಟಕಾದಿಗಳಲ್ಲಿ ಈಗ ಉಳಿದು ಬಂದಿದೆ. ಇವುಗಳಲ್ಲಿ ಎಲ್ಲ ಕಾಲಕ್ಕೂ ಅನ್ವಯಿಸುವ ನೀತಿಯಿದೆ, ರಾಜನೀತಿ ಇದೆ, ಮನುಷ್ಯನ ಮನಸ್ಸಿನ ಅಧ್ಯಯನವಿದೆ. ಬದುಕಲು ಬೇಕಾದ ಸೂತ್ರಗಳಿವೆ. ವ್ಯಕ್ತಿಗೂ ಸಮಾಜಕ್ಕೂ ಪ್ರಗತಿ ಸಾಧಿಸಲು ಅವಶ್ಯಕವಾದ ಮನಃಸ್ಥಿತಿಯ ಬಗ್ಗೆ ಚಿಂತನೆ ಇದೆ. ಇಂತಹ ಹಲವು ಚಿಂತನೆಗಳ ಸಂಗ್ರಹವೇ ಈ ಸಂಕಲನ. ಸಾವಿರಾರು ವರ್ಷಗಳ ಸಂಸ್ಕಾರದಿಂದ ಪಕ್ವವಾದ ಒಂದು ಸಮಾಜದ ದನಿಯಾಗಿ ಹೊರಬಂದಿರುವ ಈ ವಿಚಾರಗಳು ಸಾರ್ವಕಾಲಿಕವಾದವು. 

About the Author

ಪಿ.ಎಸ್. ರಾಮಾನುಜಂ
(16 October 1941)

ಪಿ.ಎಸ್. ರಾಮಾನುಜಂ ಕರ್ನಾಟಕ ರಾಜ್ಯ ಪೊಲಿಸ್ ಇಲಾಖೆಯಲ್ಲಿ IPS ಅಧಿಕಾರಿಗಳಾಗಿದ್ದು ಎಡಿಶನಲ್ ಡೈರೆಕ್ಟರ್ ಜನರಲ್ ಆಫ್ ಪೊಲಿಸ್ (ADGP) ಆಗಿ ಕಾರ್ಯನಿರ್ವಹಿಸಿ 2001ರಲ್ಲಿ ನಿವೃತ್ತರಾದರು. ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅವರ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಗ್ರಾಮ. ತಂದೆ ಪ್ರತಿವಾದಿ ಭಯಂಕರ ಎಂದೇ ಬಿರುದಾಂಕಿತರಾಗಿದ್ದ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಆರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ ಪೂರ್ಣಗೊಳಿಸಿದ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ(ಆನರ್ಸ್) ಪದವಿ ಪಡೆದರು,ಆನಂತರ ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್, ಎಂ.ಎ ಪ್ರಥಮ ರ್ಯಾಂಕ್ ಸೇರಿದಂತೆ ಐದು ಚಿನ್ನದ ...

READ MORE

Related Books