ಹೋಗಿ ಬಾ ಮಗಳೇ

Author : ವಿರೂಪಾಕ್ಷ ದೇವರಮನೆ

Pages 188

₹ 150.00




Year of Publication: 2017
Published by: ಸಾವಣ್ಣ ಎಂಟರ್ ಪ್ರೈಸಸ್
Address: #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ ಬೆಂಗಳೂರು-560004
Phone: 9845224979

Synopsys

’ನೀನಿಲ್ಲದೆ ನನಗೇನಿದೆ’,’ಸ್ವಲ್ಪ ಮಾತಾಡಿ ಪ್ಲೀಸ್‌’ ರೀತಿಯ ಕೃತಿಗಳನ್ನು ಪ್ರಕಟಿಸಿದ ಡಾ. ವಿರೂಪಾಕ್ಷ ದೇವರಮನೆ ತವರಿನಿಂದ ಗಂಡನ ಮನೆಗೆ ಹೊರಟು ನಿಂತ ಮಗಳನ್ನು ಧ್ಯಾನಿಸಿ ಬರೆದ ಸ್ವ- ಸಹಾಯ ಮಾದರಿಯ ಪುಸ್ತಕ ಇದು. 

ದಾಂಪತ್ಯ ಜೀವನ ಹೇಗಿರಬೇಕು ಎನ್ನುವುದನ್ನು ಸಲಹಾರೂಪದಲ್ಲಿ ಕೃತಿ ಹೇಳುತ್ತದೆ. ಹಾಗೆಂದು ಮಗಳಿಗೆ ಮಾತ್ರ ಸಲಹೆ ಇಲ್ಲಿಲ್ಲ. ಗಂಡನ ಮನೆಯವರು ಅರಿಯಬೇಕಾದ ಅನೇಕ ಸೂಕ್ಷ್ಮ ಸಂಗತಿಗಳನ್ನು ಪುಸ್ತಕ ತಿಳಿಸುತ್ತದೆ. ಮದುವೆಯಾಗುತ್ತಿರುವವರಿಗೆ ಒಂದೊಳ್ಳೆ ಉಡುಗೊರೆಯಾಗಿ ನೀಡಬಹುದಾದ ಕೃತಿ ಇದು. 

About the Author

ವಿರೂಪಾಕ್ಷ ದೇವರಮನೆ

ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು. ಮಕ್ಕಳು, ಹದಿಹರೆಯದವರು ಮತ್ತು ಯುವಜನತೆಯ ಶಿಕ್ಷಣ, ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿದ್ದು ಮದ್ಯವ್ಯಸನಿಗಳ ಮಕ್ಕಳಿಗಾಗಿ ...

READ MORE

Related Books