ಬದುಕು ಧನ್ಯೋಸ್ಮಿ

Author : ಶ್ರೀನಿವಾಸಮೂರ್ತಿ ಎನ್. ಸುಂಡ್ರಹಳ್ಳಿ

Pages 152

₹ 180.00




Year of Publication: 2022
Published by: ಸಾವಣ್ಣ ಎಂಟರ್‌ಪ್ರೈಸಸ್
Address: # 12, ಬೈರಸಂದ್ರ ಮುಖ್ಯರಸ್ತೆ, 1ನೇ ಬ್ಲಾಕ್ ಪೂರ್ವ, 1ನೇ ಬ್ಲಾಕ್, ಜಯನಗರ, ಬೆಂಗಳೂರು-560022

Synopsys

ಲೇಖಕ ಶ್ರೀನಿವಾಸಮೂರ್ತಿ ಎಸ್. ಸುಂಡ್ರಹಳ್ಳಿ ಅವರ ಕೃತಿ-ಬದುಕು ಧನ್ಯೋಸ್ಮಿ. ಪ್ರೇಮತ್ವ, ವ್ಯಕ್ತಿತ್ವ ಹಾಗೂ ಅಧ್ಯಾತ್ಮ ಎಂಬುದು ಈ ಕೃತಿಯಲ್ಲಿ ಬಹುವಾಗಿ ಚರ್ಚೆಗೊಳಪಡುವ ಪರಿಕಲ್ಪನೆಗಳು. ವ್ಯಕ್ತಿತ್ವ ವಿಕಸನವಾಗಿ ಪ್ರೇರಣಾತ್ಮಕ ಬರಹಗಳನ್ನು ಈ ಕೃತಿ ಒಳಗೊಂಡಿದೆ. ಪ್ರೇಮ ಹಾಗೂ ಅಧ್ಯಾತ್ಮ ಒಂದೇ ನೆಲೆಯಲ್ಲಿರುವ ಎರಡು ವಿಭಿನ್ನ ಪರಿಕಲ್ಪನೆಗಳು. ವ್ಯಕ್ತಿತ್ವಗಳ ವಿಭಿನ್ನತೆಯೊಂದಿಗೆ ವ್ಯಕ್ತಿಗಳ ಸಾಧನೆಯ ದಿಕ್ಕು ನಿರ್ಧಾರವಾಗುತ್ತದೆ. ಪ್ರೇಮ ಹಾಗೂ ಅಧ್ಯಾತ್ಮ ಎರಡನ್ನೂ ಗ್ರಹಿಸುವ ವಿಧಾನಗಳು ಭಿನ್ನವಾಗುತ್ತವೆ/. ಇಂತಹ ಸಂಗತಿಗಳ ಚರ್ಚೆಯೊಂದಿಗೆ ಅರ್ಥಪೂರ್ಣ ಜ್ಞಾನ ನೀಡುವ ಇಲ್ಲಿಯ ಬರಹವು ಬದುಕಿನ ಪ್ರೀತಿಯನ್ನು ಹೆಚ್ಚಿಸುತ್ತವೆ.

About the Author

ಶ್ರೀನಿವಾಸಮೂರ್ತಿ ಎನ್. ಸುಂಡ್ರಹಳ್ಳಿ

ಶ್ರೀನಿವಾಸಮೂರ್ತಿ ಎನ್. ಸುಂಡ್ರಹಳ್ಳಿ ಅವರು ಲೇಖಕ ಹಾಗೂ ಅಂಕಣಕಾರರಾಗಿದ್ದಾರೆ. ವಿಜಯ ಕರ್ನಾಟಕ, ಉದಯವಾಣಿ, ಸಂಯುಕ್ತ ಕರ್ನಾಟಕ, ವಿಶ್ವವಾಣಿ ದಿನಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು ಇನ್ಸ್ ಪೈರ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು ; ವಿಧಿಯ ಬೆನ್ನೇರಿ, ಸೆಲ್ಪೀ ವಿಥ್ ವಿಕ್ಟರಿ, ನಾಗರಿಕ ಪ್ರಜ್ಞೆ, ಮುಗುಳು, ಹಂಬು, ಕಡಲು ಕೂಡುವ ಹನಿಗಳು, ಎನ್ವಿರಾನ್ಮೆಂಟಲ್ ಸ್ಟಡೀಸ್ ಪರ್ಸನಾಲಿಟಿ ಡೆವೆಲಪ್ ಮೆಂಟ್( ಪದವಿ ವಿದ್ಯಾರ್ಥಿಗಳಿಗಾಗಿ) , ಎನ್ವಿರಾನ್ಮೆಂಟ್ ಅಂಡ್ ಪಬ್ಲಿಕ್ ಹೆಲ್ತ್.   ...

READ MORE

Related Books