ವ್ಯಕ್ತಿತ್ವ ವಿಕಸನದ ವಿಚಾರವನ್ನಿಟ್ಟುಕೊಂಡೇ ಬರೆದ ಪುಸ್ತಕ ಸಿಬಂತಿ ಪದ್ಮನಾಭ ಅವರ 'ನಮ್ಮೊಳಗಿದೆ ಗೆಲುವಿನ ಬೆಳಕು' ಇದಕ್ಕೆ ಕೊಟ್ಟ, 'ಬದುಕು ಬೆಳಗುವ ಭಾವ ಚಿತ್ರಗಳು' ಎಂಬ ಉಪಶೀರ್ಷಿಕೆ ವ್ಯಕ್ತಿತ್ವ ವಿಕಾಸವಷ್ಟೇ ಕೃತಿಯ ಆಶಯವಲ್ಲ ಎಂಬುದನ್ನು ಸಾರುತ್ತದೆ. ಅದು ನಿಜ ಕೂಡ. ಈ ಕೃತಿಯಲ್ಲಿ ಲೇಖಕರ ವಿಸ್ತಾರವಾದ ಓದು, ಜೀವನದ ಗ್ರಹಿಕೆ, ವೃತ್ತಿಯ ಅನುಭವ ದ್ರವ್ಯಗಳು ಹೂರಣವಾಗಿ ಕಾಣಿಸಿಕೊಂಡಿವೆ. ಸದ್ಯ ಮರೆಗೆ ಸಲ್ಲುತ್ತಿರುವ ಅಂಚೆ ಕವರುಗಳು, ಇನ್‌ಲ್ಯಾಂಡ್ ಪತ್ರಗಳು ತರುತ್ತಿದ್ದ ಕುಶಲ ವಾರ್ತೆಯ ನವಿರು,ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶಿಯಾಗುವ ಸೂತ್ರಗಳು, ಕಾಲೇಜು ಕೊಠಡಿಗಳ ಡೆಸ್ಕ್ ಕಾವ್ಯಲೋಕ,ವಂಶವೃಕ್ಷದ ಅರ್ಥಾತ್ ಡಿಎನ್‌ಎ ಮೂಲಕ ಬೇರುಗಳ ಹುಡುಕಾಟ, 'ನಾನು ಯಾರು' ಎಂಬ ಮಹಾ ಪ್ರಶ್ನೆಯ ವಿಶ್ಲೇಷಣೆ, ಸಂಸ್ಕೃತಿಯ ಶೋಧ, ಜನಸಮ್ಮರ್ದದ ನಡುವೆ ಏಕಾಂತ ಸಿಗದ ಏಕಾಂಗಿತನ, ಅಪ್ಪ, ಅಮ್ಮ, ಅಜ್ಜ ಅಜ್ಜಿ,ಮಕ್ಕಳು, ಮೊಮ್ಮಕ್ಕಳ ಸಂಬಂಧದ ಕಳಕಳಿ…ಹೀಗೆ ಹತ್ತಾರು ಸಂಗತಿಗಳು ಹೃದ್ಯವಾಗಿ ಅರಳಿಕೊಂಡಿವೆ ಇಲ್ಲಿ.
©2023 Book Brahma Private Limited.