ಮಕ್ಕಳೊಡನೆ ಆಟ, ಪಾಠ, ಒಡನಾಟ

Author : ಗಿರಿಮನೆ ಶ್ಯಾಮರಾವ್

Pages 160

₹ 140.00




Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsys

ಗಿರಿಮನೆ ಶ್ಯಾಮರಾವ್‍ರ ವ್ಯಕ್ತಿತ್ವ ವಿಕಸನ ಕೃತಿಗಳ ಸರಣಿಯಲ್ಲೇ ಹೊರಬಂದ ‘ಮಕ್ಕಳೊಡನೆ ಆಟ ಪಾಠ, ಒಡನಾಟ’ ಲೇಖನ ಮಾಲಿಕೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಪ್ರತಿ ಮಗುವಿನಲ್ಲಿಯು ವಿವಿಧ ರೀತಿಯ ಸಾಮಥ್ರ್ಯ, ಪ್ರತಿಭೆ ಇರುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಅದನ್ನು ಹೊರ ಜಗತ್ತಿಗೆ ಪರಿಚಯಿಸುವಲ್ಲಿ ಪೋಷಕರು ಕೆಲವೊಮ್ಮೆ ವಿಫಲವಾಗಬಹುದು. ಪ್ರಸ್ತುತ ಈ ಕಾದಂಬರಿಯಲ್ಲಿ ಈ ಎಲ್ಲಾ ಅಂಶಗಳ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ. ಮಕ್ಕಳದ್ದು ಏನೂ ಅರಿಯದ ಮುಗ್ಧ ಮನಸ್ಸು ಎಂಬ ಮತಿದೆ. ಆದರೆ ಇಂತಹ ಮಕ್ಕಳಲ್ಲೂ ಕಾರಣಾಂತರಗಳಿಂದ ಭೇದ ಹುಟ್ಟುತ್ತದೆ, ಅದು ಯಾಕೆ, ಮಕ್ಕಳು ಹಠ ಹಿಡಿದಾಗ, ಅವರ ಮನಸ್ಸು ಹತೋಟಿಯಲ್ಲಿರದಿದ್ದಾಗ ಹೇಗೆ ಆ ಮುಗ್ಧ ಮನಸ್ಸುಗಳ ಜೊತೆ ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂಬುದರ ಬಗ್ಗೆಯು ಪುಸ್ತಕ ವಿವರಿಸುತ್ತದೆ. ಅಷ್ಟೇ ಅಲ್ಲದೆ, ಮಕ್ಕಳಿಗೆ ಕಥೆ ಎಂದರೆ ಪ್ರೀತಿ. ಆದ್ದರಿಂದ ಕಥೆಯ ಮೂಲಕವೇ ಮಕ್ಕಳಲ್ಲಿ ಹೇಗೆ ವ್ಯಕ್ತಿತ್ವ ವಿಕಸನ ಸೃಷ್ಟಿಸುವುದು, ಅಂತಹ ಕಥೆಗಳು ಯಾವವು ಹಾಗೂ ಅದನ್ನು ಹೇಗೆ ಹೇಳುವುದು, ಈ ಕಥೆಗಳ ಮೂಲಕವೇ ಮಕ್ಕಳಿಗೆ ಹೇಗೆ ನಮ್ಮ ಆಚರಣೆ, ಹಬ್ಬ, ಸಂಸ್ಕøತಿಗಳನ್ನು ಪರಿಚಯಿಸುವುದು ಎಂದು ಲೇಖಕರು ತಿಳಿಸಿದ್ದಾರೆ. ವಿಶೇಷವಾಗಿ ಖ್ಯಾತ ಮನೋವೈದ್ಯ ಡಾ||ಸಿ. ಆರ್. ಚಂದ್ರಶೇಖರ್ ಅವರ ಮುನ್ನುಡಿ ಹಾಗೂ ಸಲಹೆ ಸೂಚನೆಗಳು ಮಕ್ಕಳ ವ್ಯಕ್ತಿತ್ವ ವಿಕಸನದ ಕುರಿತ ಈ ಕೃತಿಗೆ ಮತ್ತಷ್ಟು ಶೋಭೆ ತಂದಿದೆ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books