ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ

Author : ಗಿರಿಮನೆ ಶ್ಯಾಮರಾವ್

Pages 100

₹ 55.00




Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsys

ಮಕ್ಕಳ ದೇಹ ಪುಟ್ಟದಾಗಿರುತ್ತದೆ. ಆದರೆ ಅವರ ಮನಸ್ಸು ಅಗಾದವದದ್ದು,ಸ ಅವರ ಮನಸಿನಲ್ಲಿ ಏನೆಲ್ಲಾ ಆಲೋಚನೆಗಳು ತರ್ಕಗಳು ನಡೆಯುತಿರುತ್ತವೆ ಎಂದು ಯಾರು ಊಹಿಸಲಾರರು. ಅವರ ಯೋಚನೆಗಳೇನಿದ್ದರು ಆಕಾಶಕ್ಕೆ ಏಣಿ ಹಾಕುವ, ನಕ್ಷತ್ರವನ್ನೇ ಹಿಡಿದು ತರುವಂತಹದ್ದಾಗಿರುತ್ತದೆ. ಅವರ ಇಂತಹ ಯೋಚನೆಗಳಿಂದಾ ಅವರ ಪ್ರತಿಭೆಗಳು ಹತ್ತು ಹಲವು ದಿಕ್ಕುಗಳಲ್ಲಿ ಚಿಗುರೊಡೆಯುತ್ತವೆ. ಇದೇ ಅಂಶಗಳೊಂದಿಗೆ ಹೊರಬಂದ ಗಿರಿಮನೆ ಶ್ಯಾಮರಾವ್‍ರ ಮತ್ತೊಂದು ಮಕ್ಕಳ ವ್ಯಕ್ತಿತ್ವ ವಿಕಸನ ಕೃತಿ ‘ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಬೆಳಸಿ’. ಮಕ್ಕಳಲ್ಲಿ ಬಾಲ್ಯದಲ್ಲಿನ ಪ್ರತಿಭೆಗಳು ಹಾಗೆ ವ್ಯರ್ಥವಾಗಿ ಹೋಗಬರದು. ಸರಿಯಾದ ಸಮಯದಲ್ಲಿ ಹಿರಿಯರು ಅದನ್ನು ಗುರುತು ಹಿಡಿದು, ಬೆಳೆಸಿದರೆ ಮುಂದೆ ಅವರು ಇಡೀ ಜೀವನವನ್ನು ಸಫಲವಾಗಿ ನಡೆಸುವಂತೆ ಆಗುತ್ತದೆ. ಇಡೀ ಕೃತಿ ಈ ರೀತಿ ಮಕ್ಕಳಲ್ಲಿನ ವಿನೂತನ ಪ್ರತಿಭೆಗಳು ಹಾಗೂ ಅದನ್ನು ಉಪಯುಕ್ತಗೊಳಿಸಿಕೊಳ್ಳುವ ಬಗೆ, ಇದರ ಬಗ್ಗೆಯೇ ಮಾತನಡುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಹಲವಾರು ತಜ್ಞರು ಹಾಗೂ ಸೈಕ್ಯಟ್ರಿಸ್ಟ್‍ಗಳ ಅಭಿಪ್ರಾಯದೊಂದಿಗೆ ಮಕ್ಕಳನ್ನು ಅವರ ಪ್ರತಿಭೆಯನ್ನು ಅರಿಯುವ ಕೃತಿ ಇದಾಗಿದೆ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books