ಸೋಲಿನ ನೆಪವೇಕೆ ಗೆಲುವಿನ ಜಪವಿರಲಿ

Author : ಸಂತೋಷ್ ರಾವ್ ಪೆರ್ಮುಡ

Pages 144

₹ 150.00
Year of Publication: 2022
Published by: ಗೋಮಿನಿ ಪ್ರಕಾಶನ
Address: ‘ಅಪರಿಮಿತ’, 6ನೇ ಕ್ರಾಸ್, ಚನ್ನಕೇಶವ ಲೇಔಟ್, ಗೂಳೂರು ಗೃಹಮಂಡಳಿ ಹತ್ತಿರ, ಗೂಳೂರು- 572 118, ತುಮಕೂರು, ಕರ್ನಾಟಕ
Phone: 9986692342

Synopsys

ಸಂತೋಷ್ ರಾವ್ ಪೆರ್ಮುಡ ಅವರ ಕತೆಗಳ ಸಂಕಲನ ಸೋಲಿನ ನೆಪವೇಕೆ ಗೆಲುವಿನ ಜಪವಿರಲಿ. ಉಪನ್ಯಾಸಕಿ ಹಾಗೂ ಲೇಖಕಿ ಆರತಿ ಪಟ್ರಮೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರ ಹೇಳುವಂತೆ, ಮಕ್ಕಳಿಗೆ ಕತೆ ಹೇಳಬೇಕೆಂಬ ಸಂಪ್ರದಾಯವೊಂದು ನಮ್ಮಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿ ಇರುವಂಥದ್ದು. ಸದ್ಯ ದೈನಂದಿನ ಬದುಕಿನ ಉದಾಹರಣೆಗಳು, ಪ್ರತಿ ಹೆಜ್ಜೆಯೂ ಸೋಲಿನ ಕೊಂಪೆಗೂ ದೂಡಿದರೂ ಹಳೆಯ ನೋವನ್ನೆಲ್ಲ ಕೊಡವಿ ಗೆಲುವಿನತ್ತ ಮೊಗಮಾಡಿ ಹಸನ್ಮುಖರಾದವರ ಯಶೋಗಾಥೆಗಳು ನಮಗೆ ನೆರವಿಗೆ ಬರುತ್ತವೆ, ಮಾತ್ರವಲ್ಲ ವರ್ತಮಾನದ ಉದಾಹರಣೆಗಳೇ ಆಗಿರುವುದರಿಂದ ಕೇಳುವವರಿಗೂ ಕುತೂಹಲ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸಂತೋಷ್ ಅವರ ಸೋಲಿನ ನೆಪವೇಕೆ ? ಗೆಲುವಿನ ಜಪವಿರಲಿ ಒಬ್ಬ ತರಬೇತುದಾರನಾಗಿ ಅವರ ಶ್ರಮವನ್ನು ಸಮರ್ಥವಾಗಿ ಬಿಂಬಿಸುತ್ತದೆ. ಒಟ್ಟು 64 ಕಥೆಗಳ ಜೊತೆಗೆ ಬದುಕಿನ ಅನೇಕ ಮೌಲ್ಯಗಳನ್ನು ಇಲ್ಲಿನ ಬರಹಗಳು ತಿಳಿಸಿಕೊಡುತ್ತವೆ ಎಂದಿದ್ದಾರೆ.

About the Author

ಸಂತೋಷ್ ರಾವ್ ಪೆರ್ಮುಡ
(26 March 1983)

 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...

READ MORE

Related Books