ಜ್ಯೋತಿಯೇ ಆಗು ಜಗಕೆಲ್ಲ

Author : ಡಿ. ಲಿಂಗಯ್ಯ

Pages 32

₹ 10.00




Year of Publication: 2008
Published by: ಕರ್ನಾಟಕ ಜಾನಪದ ಪರಿಷತ್ತು
Address: ಜಲದರ್ಶಿನಿ ಲೇಔಟ್‌, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹಾದ್ವಾರದ ಬಳಿ, ನ್ಯೂ ಬಿಇಎಲ್‌ ರಸ್ತೆ, ಬೆಂಗಳೂರು

Synopsys

ಮೌಖಿಕ ಪರಂಪರೆಯಲ್ಲಿ ಜನಪದ ನೀತಿ ಸಂಹಿತೆ ನಿರಂತರವಾಗಿ ಸಾಗಿಬಂದಿದೆ. ಇದು ಜನಪದ ಶಿಕ್ಷಣದ ಒಂದು ಅಂಗ. ಅನುಭವಸ್ಥರ ಮಾತೇ ಜನಪದರಿಗೆ ವೇದ, ಉಪನಿಷತ್ತು. ಜನಪದರ ನೀತಿಸೂಕ್ತಿಗಳು ಮನನೀಯವಾಗಿವೆ. ಸ್ವಾಸ್ಥ್ಯ ಬದುಕಿಗೆ ಸಂಜೀವಿನಿಯಾಗಿವೆ; ಸಂಸ್ಕೃತಿಯ ಸಾಕ್ಷಿಯಾಗಿವೆ. ಇವು ಅರ್ಥಪೂರ್ಣವಾದ ವಿವೇಚನೆಗೆ ಅವಕಾಶ ನೀಡುತ್ತವೆ. ಜ್ಯೋತಿಯೇ ಆಗು ಜಗಕೆಲ್ಲ-ಕೃತಿಯು ಗೃಹಸ್ಥನಿಗೆ ಜನಪದ ನೀತಿಯ ಅರಿವನ್ನು ಮೂಡಿಸುವ ಕೃತಿಯಾಗಿದೆ.

About the Author

ಡಿ. ಲಿಂಗಯ್ಯ
(16 December 1939 - 13 September 2012)

ಜಾನಪದ ತಜ್ಞ,  ಸಾಹಿತಿ ಪ್ರೊ.ಡಿ. ಲಿಂಗಣ್ಣ ಅವರು ಜನಿಸಿದ್ದು 1939 ಡಿಸೆಂಬರ್‌ 16ರಂದು. ಶ್ರೀರಂಗಪಟ್ಟಣ ತಾಲ್ಲೂಕಿನ ಪೀ ಹಳ್ಳಿಯವರಾದ ಇವರು ಮಂಡ್ಯ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಸಾಹಿತಿ, ಸಂಶೋಧಕರಾಗಿ ಕನ್ನಡ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿರುವ ಇವರು ನಾಟಕ, ಕತೆ, ಕವನ, ಜೀವನ ಚರಿತ್ರೆ, ವ್ಯಕ್ತಿಚಿತ್ರಗಳು, ಪ್ರಬಂಧ ಹಾಗೂ ಗ್ರಂಥ ಸಂಪಾದನಾ ಕ್ಷೇತ್ರದಲ್ಲಿಯು ಸೇವೆ ಸಲ್ಲಿಸಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಕೊಂತಿ ಪೂಜೆ, ಮಣ್ಣಿನ ಮಿಡಿತ, ಪಡಿನೆರಳು, ಬಯಲು ಸೀಮೆಯ ಜನಪದ ಗೀತೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ಇವರಿಗೆ ...

READ MORE

Related Books