ಜಾನಪದ ಶಿಷ್ಟಪದ

Author : ಡಿ.ಕೆ.ರಾಜೇಂದ್ರ

Pages 359

₹ 120.00




Year of Publication: 2003
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕಾವ್ಯ, ಮಹಾಕಾವ್ಯ, ಲಾವಣಿ, ಜನಪದ ಗೀತೆ, ಜನಪದ ಕಥನ, ಆತ್ಮಚರಿತ್ರೆ, ಗದ್ಯವಿಮರ್ಶೆ ಹೀಗೆ ಹತ್ತು ಹಲವು ವಿಷಯಗಳನ್ನು ಕ್ರೋಢಿಕರಿಸಿಕೊಂಡು ಒಳ ಸ್ವರೂಪದೊಂದಿಗೆ ಡಿ.ಕೆ ರಾಜೇಂದ್ರ ಅವರು ಈ ಕೃತಿಯನ್ನು ರಚಿಸಿದ್ದಾರೆ. ಹೀಗೆ ದಕ್ಷಿಣ ಕರ್ನಾಟಕದ ಪ್ರಮುಖ ಕಲೆಯಾದ ಜಾನಪದದ ಬಗ್ಗೆ ವಿವಿಧ ಆಯಾಮಗಳನ್ನು ಇಲ್ಲಿ ವ್ಯಾಖ್ಯಾನಿಸುವಾಗ, ಹೇಗೆ ಶಿಷ್ಯ ಮತ್ತು ಪರಿಶಿಷ್ಟಗಳು ಸೂಕ್ಷವಾಗಿ ಒಂದಕ್ಕೊಂದು ಸಂಬಂಧ ಹೊಂದಿರುತ್ತದೆ. ಜನಪದವು ಹೀಗೆ ಅದ್ಯತಗೊಳ್ಳುವುದೆಂದರೆ ಆಧುನಿಕ ನಾಗರಿಕತಗೆ ಸಂಸ್ಕ್ರತಿಯ ಬಗೆಯಲ್ಲಿ ಮೈಗೂಡಿಸುವುದು ಎಂದು ಪರಿಗಣಿಸಬಹುದು. ಇಂತಹ ಹಲವು ಸಂಗತಿಗಳ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಡಿ.ಕೆ.ರಾಜೇಂದ್ರ

ಜನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಿ.ಕೆ. ರಾಜೇಂದ್ರ ಅವರು ಶಿಷ್ಟ ಸಾಹಿತ್ಯದಲ್ಲಿಯೂ ಗಮನಾರ್ಹ ಕೆಲಸ ಮಾಡಿದವರು. ರಾಜೇಂದ್ರ ಅವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದಂಡಿನ ಶಿವರದವರು. ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ. ಪ್ರಾಥಮಿಕ ಶಿಕ್ಷಣವನ್ನು ದಂಡಿನ ಶಿವರದಲ್ಲಿ ಪಡೆದ ಅವರು ನಂತರ ಅರಕಲಗೂಡು ಮತ್ತು ಶಿರಾ ಪ್ರೌಢಶಾಲೆಗಳಲ್ಲಿ  ಪಡೆದರು. ಹಾಸನದ ಪ್ರಥಮ ದರ್ಜೆ ಕಾಲೇಜಿನಿಂದ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆರು. ಅವರು ಸಲ್ಲಿಸಿದ ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಕುರಿತ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ. ನೀಡಿದೆ. ಕನ್ನಡ ...

READ MORE

Related Books