ಆಧುನಿಕ ಆದಿಮ

Author : ಟಿ.ಗೋವಿಂದರಾಜು

Pages 360

₹ 360.00




Year of Publication: 2019
Published by: ಪ್ರಸಾರಾಂಗ
Address: ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ -570006

Synopsys

ಸಾಂಸ್ಕೃತಿಕ ಅಧ್ಯಯನದ ವಿಸ್ತೃತ ಅವಕಾಶಗಳನ್ನು ಶೋಧನಪೂರ್ವಕವಾಗಿ ಪರಿಚಯಿಸುವ ಕೃತಿ”ಆಧುನಿಕ ಆದಿಮ’. ಈ ಕೃತಿಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಜಾನಪದೀಯ ನೆಲೆಯಲ್ಲಿ ವಿವೇಚಿಸುವ 37 ಲೇಖನಗಳಿವೆ. ಬಾಗಿಲು ಎಂಬ ಪರಿಕಲ್ಪನೆ ನಾನಾ ತೆರನಾದ ಸಾಂಸ್ಕೃತಿಕ ನೆಲೆಗಳಲ್ಲಿ ವಿವಿಧ ರೀತಿಯ ಆಲೋಚನೆಗಳು ಈ ಕೃತಿಯಲ್ಲಿ ವಿವರಿಸಿದ್ದಾರೆ. ಕೃತಿಯ ಕುರಿತು ಮಾತನಾಡುತ್ತಾ ಗೋವಿಂದರಾಜರು ’ಭಾರತೀಯರಲ್ಲಿನ ದಶಾವತಾರ ಕತೆಗಳೆಂದರೆ ಜೀವ ವಿಕಾಸದ ಅವಸ್ಥಾಂತರದ ದಾಖಲೆಗಳೇ, ರೂಪಕಗಳೇ ಆಗಿವೆ ಎಂಬರ್ಥದಲ್ಲಿ ಪಾಶ್ವಾತ್ಯ ಅಧ್ಯಯನಕಾರರೊಬ್ಬರು ದಶಕಗಳ ಹಿಂದೆಯೇ ತಿಳಿಸಿಕೊಟ್ಟಿದ್ದರು’ ಎಂದು ಸ್ಮರಿಸಿದರು. ಇತ್ತೀಚೆಗೆ ಈ ಪುರಾಣಗಳು ರಾಜಕೀಯಕ್ಕಾಗಿ ಅಪವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದು- ತಿಳಿವು ಎಂಬುದು ಆಗಾಗ ಅಡ್ಡದಾರಿ ಹಿಡಿದು ತನ್ನ ವಿನಾಶಕ್ಕೆ ತಾನೇ ಕಾರಣವಾಗುತ್ತದೆ ಎನ್ನುವುದಕ್ಕೆ ಒಂದು ನಿದರ್ಶನವಾಗುತ್ತದೆ. ಜ್ಞಾನ ಪ್ರವಾಹದಲ್ಲಿ ಈ ಬಗೆಯ ಅವಸ್ಥೆಗಳು ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ಅದು ಆಗಾಗ ಇಂಥಾ ಸ್ಥಿತಿಗಳನ್ನು ಅನುಭವಿಸಿಯೇ ಹೊಸ ವ್ಯಾಖ್ಯಾನಕ್ಕೆ, ಹುಟ್ಟಿಗೆ ದಾರಿ ಮಾಡಿಕೊಡುತ್ತಿರುತ್ತದೆ ಎನ್ನುತ್ತಾರೆ. ಇದನ್ನೇ ಕಂಬಳಿ ಹುಳು ಮತ್ತು ಚಿಟ್ಟೆಯ ರೂಪಕದ ಮೂಲಕ ಸೂತ್ರೀಕರಿಸಲು ಲೇಖಕರು ಪ್ರಯತ್ನಿಸಿದ್ದಾರೆ.

ಈ ಪರಿಯ ಸೊಬಗು: ಅಲಂಕಾರ ಸಂಸ್ಕೃತಿಯ ಅಚ್ಚರಿಯ ಲೋಕ, ಅಪಹರಣ ಅಪಹರಣ, ಜ್ಞಾನ ನೆಮ್ಮದಿಯ ಬಾಗಿಲು, ಹಳೆಯ ಮನೆಗಳು-ಹೊಸತು ಮನಗಳು, ಪರಂಪರಾಗತ ಹಳ್ಳಿಗಳ ಪ್ರವಾಸೋದ್ಯಮ-ಕೆಲವು ಅವಲೋಕನಗಳು, ಗೊಂಬೆ ಪ್ರಪಂಚ, ಹರಿ ಹರಿ ಗೋವು ನಾನು, ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ: ಒಂದು ಜಾನಪದೀಯ ಪ್ರವೇಶ, ಪ್ರಾಚ್ಯ ಜಾನಪದೀಯ ಅಧ್ಯಯನ, ಪ್ರಾಚ್ಯ ವಾದ್ಯ ವಿಜ್ಞಾನ-ಪರಂಪರೆ, ಸ್ಥಿತ್ಯಂತರದ ಬದುಕಿನಲ್ಲಿ ಬೇಟೆ ಸಂಸ್ಕೃತಿ, ಜಾಗತೀಕರಣ ಮತ್ತು ದೇಸೀ ವೈದ್ಯ, ಅಭಿಮಾನೀ ದೇವರು ‘ಆರಾಧನಾ ದೈವವಾದ ಬೆಡಗು, ಕೆಂಪೇಗೌಡರು ಮತ್ತು ಬೆಂಗಳೂರು ಮಹಾನಗರ ಜಾನಪದ, ಚೆನ್ನಾದೇವಿಯ ದೆವ್ವಗಳು: ಆದಿಮಕೆ ಆಧುನಿಕ ಅಭಿವ್ಯಕ್ತಿ, ಅಂಡಮಾನ್: ಮೂರು ಮುಖ

 

 

About the Author

ಟಿ.ಗೋವಿಂದರಾಜು

ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ  ದೊಡ್ಡೇರಿ ತಿಮ್ಮರಾಯಪ್ಪ, ತಾಯಿ  ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ  ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು,  ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು  ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...

READ MORE

Reviews

ಆಧುನಿಕದಲ್ಲಿನ ಆದಿಮ ಸ್ಥಿತಿ 

ಬೆಂಗಳೂರು ಎನ್ನುವ ಮಹಾನಗರಿ ರೂಪುಗೊಂಡಿರುವುದು ಹೇಗೆ? ಇದೊಂದು ಹಳ್ಳಿಗಳ ಗುಚ್ಚ ಪಟ್ಟಣಿಗರಾಗಿ ರೂಪಾಂತರಗೊಂಡ ಇಲ್ಲಿನ ಹಳ್ಳಿಗರಿಗೆ ಹೊಸತನ್ನು ನಿರಾಕರಿಸಲು ಆಗುತ್ತಿಲ್ಲ. ಮೂಲ ಬೇರುಗಳ ಕತ್ತರಿಸಲೂ ಆಗುತ್ತಿಲ್ಲ. ಬೆಂಗಳೂರಿನ ಬೀದಿಗಳಲ್ಲಿ ಹಬ್ಬವೋ ಜಾತ್ರೆಗಳೊ ಸಾಮಾನ್ಯ. ಪ್ರಾಚೀನ ಬದುಕಿನ ಕೆಲವು ನಂಬಿಕೆ, ಆಚರಣೆಗಳನ್ನು ಅರಿವಿಲ್ಲದೆಯೇ ಆಚರಿಸುವುದನ್ನು ಕಾಣಬಹುದು. ಇವೆಲ್ಲವನ್ನೂ ಸಂಪ್ರದಾಯವೆಂದಷ್ಟೇ ಮೈಸೂರು ವಿಶ್ವವಿದ್ಯಾನಿಲಯ ಭಾವಿಸಿರುತ್ತಾರೆ. ಇದನ್ನೇ ‘ಆಧುನಿಕರಲ್ಲಿನ ಆದಿಮ ಸ್ಥಿತಿ' ಎಂದು ಸಂಸ್ಕೃತಿ ಚಿಂತಕರಾದ ಡಾ.ಟಿ.ಗೋವಿಂದರಾಜು ಗುರುತಿಸಿದ್ದಾರೆ. ಅವರ ಹೊಸ ಪುಸ್ತಕ 'ಆಧುನಿಕ ಆದಿಮ' ಎನ್ನುವ ಕೃತಿಯಲ್ಲಿ 37 ಲೇಖನಗಳಿದ್ದು, ಆದಿಮ ಮತ್ತು ಆಧುನಿಕದ ನಡುವಿನ ನಂಟನ್ನು ಶೋಧಿಸುವ ಕೆಲಸ ಮಾಡಿದ್ದಾರೆ. ದನ ಕಾಯೋರಿಗೂ ಅಪಾರ್ಟ್‌ಮೆಂಟ್ ವಾಸಿಗೂ ಏನು ಸಂಬಂಧ ಎನ್ನುವುದನ್ನು ಆಸಕ್ತಿಕರವಾಗಿ ಬಿಡಿಸಿಟ್ಟಿದ್ದಾರೆ. ಆಧುನಿಕತೆ ಮತ್ತು ಬಳಸುವ ಸಾಮಗ್ರಿಗಳಿಗೆ ಅನುಗುಣವಾಗಿ ವಿನ್ಯಾಸದಲ್ಲಿ ವಿಭಿನ್ನತೆ ಗೋಚರಿಸಿದರೂ ಮೂಲ ಲಕ್ಷಣಗಳು ಉಳಿದಿವೆ ಎನ್ನುತ್ತಾರೆ.

ಜಾಗತೀಕರಣಕ್ಕೆ ಹಕ್ಕಿಪಿಕ್ಕಿಗಳು ಹೊಂದಿಕೊಂಡ ಬಗೆಯನ್ನು ತಮ್ಮ ಇನ್ನೊಂದು ಲೇಖನದಲ್ಲಿ ವಿವರಿಸಿರುವ ಲೇಖಕರು, ಅಲೆಮಾರಿಗಳಾದ ಹಕ್ಕಿಪಿಕ್ಕಿ ಸಮುದಾಯದ ಕೆಲವರು ಈಗ ಸರಕಾರ ನೀಡಿದ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು ನೆಲೆ ನಿಂತಿರಬಹುದು. ಆದರೆ, ಮೂಲ ವೃತ್ತಿ ಮಾಯವಾಗಿಲ್ಲ ಎನ್ನುವುದಕ್ಕೆ ಉದಾಹಣೆಗಳಿವೆ. ಬಿಡದಿ ಬಳಿಯಲ್ಲಿರುವ ಹಕ್ಕಿಪಿಕ್ಕಿಗಳ ಕಾಲನಿಗೆ ಹೋದರೆ, ಅಲ್ಲಿನ ಮನೆಗಳಲ್ಲಿ ವಯಸ್ಕ ಗಂಡಸರೇ ಕಾಣಿಸುವುದಿಲ್ಲ, ಅವರೆಲ್ಲ ಬರ್ಮಾ, ಚೀನಾ, ಥಾಯ್ಲೆಂಡ್‌ಗಳಲ್ಲಿದ್ದಾರೆ. ಹುಲಿ ಚರ್ಮ, ಹುಲಿಯುಗುರು, ನವಿಲು, ಉಡಗಳ ತುಪ್ಪ, ರುದ್ರಾಕ್ಷಿ, ನಗರಿಕೊಂಬು ಇತ್ಯಾದಿಗಳ ಮಾರುತ್ತಿದ್ದಾರೆ. ಅನೇಕರ ಬಳಿ ವೀಸಾ, ಪಾಸ್‌ಪೋರ್ಟ್‌ಗಳೂ ಇವೆಯಂತೆ. ವಿದೇಶಕ್ಕೆ ಹೋಗಲು ವಿದ್ಯೆ, ಕೈತುಂಬ ಹಣ ಬೇಕು ಅನ್ನುವ ಸಿದ್ದಮಾದರಿಯ ನಂಬಿಕೆಗಳನ್ನು ಹಕ್ಕಿಪಿಕ್ಕಿಗಳು ಸುಳ್ಳು ಮಾಡಿರುವುದನ್ನು ಲೇಖನದಲ್ಲಿ ವಿವರಿಸಲಾಗಿದೆ. ಜಾಗತೀಕರಣದಿಂದಾಗಿ ನಮ್ಮ ನೆಲದ ವಸ್ತುಗಳು ವಿದೇಶಕ್ಕೆ ಹೋಗುತ್ತಿವೆ.

ಹಳೆಯ ಮನೆಗಳು ಹೊಸತು ಮನಗಳು, ಪ್ರಾಚ್ಯ ವಾದ್ಯ ವಿಜ್ಞಾನ-ಪರಂಪರೆ, ಸ್ಥಿತ್ಯಂತರದ ಬದುಕಿನಲ್ಲಿ ಬೇಟೆ ಸಂಸ್ಕೃತಿ, ಚೆನ್ನಾದೇವಿಯ ದೆವ್ವಗಳು: ಆದಿಮಕೆ ಆಧುನಿಕ ಅಭಿವ್ಯಕ್ತಿ, ಅಂಡಮಾನ್ ಮೂರು ಮುಖ, ವಾಣಿಜೀಕೃತ ಬೃಹತ್ ಬೆಂಗಳೂರು ಮಹಾನಗರ ಜಾನಪದ: ಒಂದು ವಿಶ್ಲೇಷಣೆ – ಇವೂ ಸೇರಿದಂತೆ ಇತರ ಬರಹಗಳು ಸಾಂಸ್ಕೃತಿಕ ಮತ್ತು ಜನಪದೀಯ ನೆಲೆಯಲ್ಲಿ ಆದಿಮ ಮತ್ತು ಆಧುನಿಕತೆಯ ನಂಟನ್ನು ತೆರೆದಿಡುತ್ತವೆ. ಇವೆರಡರ ನಡುವೆ ಅಂತರ್ಗತವಾಗಿರುವ ಮೂಲ ಸ್ವಭಾವವನ್ನು ಗುರುತಿಸುವ ಪ್ರಯತ್ನ ಇಲ್ಲಿಯದು. ಕ್ಷೇತ್ರಕಾರ್ಯ, ಅಧ್ಯಯನದ ಫಲಿತಗಳು ಪುಸ್ತಕದುದ್ದಕ್ಕೂ ಕಾಣಿಸುತ್ತವೆ.

ಕೃಪೆ : ವಿಜಯಕರ್ನಾಟಕ (2020 ಫೆಬ್ರುವರಿ 16)

Related Books