ಕಾಡಂಚಿನ ಊರಿನಲ್ಲಿ

Author : ವಿಜಯಶ್ರೀ ಹಾಲಾಡಿ

Pages 132

₹ 120.00




Year of Publication: 2021
Published by: ಯು.ಎಸ್ ಮಹೇಶ್
Address: ಪ್ರಗತಿ ಪ್ರಕಾಶನ, ನಂ. 2406,2407/ಕೆ-1, 1ನೇ ಕ್ರಾಸ್, ಹೊಸಬಂಡೀಕೇರಿ, ಮೈಸೂರು-04
Phone: 08214287558

Synopsys

ವಿಜಯಶ್ರೀ ಹಾಲಾಡಿ ಅವರ 'ಕಾಡಂಚಿನ ಊರಿನಲ್ಲಿ' ಕೃತಿ ಮಕ್ಕಳಿಗಾಗಿ ಬರೆದ ಅನುಭವ ಕಥನ. ಯು.ಎಸ್ ಮಹೇಶ್ ಅವರು ಪ್ರಕಾಶಕರಾಗಿರುವ ಈ ಕೃತಿಯು ಮೈಸೂರಿನ 'ಪ್ರಗತಿ' ಪ್ರಕಾಶನದಿಂದ ಪ್ರಕಟವಾಗುತ್ತಿದೆ. ಸಾಹಿತಿ ಕಮಲಾ ಹೆಮ್ಮಿಗೆ ಅವರು ಬೆನ್ನುಡಿಯೊಂದಿಗೆ ಈ ಕೃತಿ ಹಾಗೂ ಕೃತಿಕಾರರಿಗೆ ಶುಭ ಕೋರಿದ್ದಾರೆ. ಶ್ರೀಕಂಠ ಮೂರ್ತಿ ಅವರು ಮುಖಪುಟ ಮಾಡಿ ಕೊಟ್ಟಿದ್ದಾರೆ.

ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಮುದೂರಿ ಎಂಬ ಹಳ್ಳಿಯಲ್ಲಿನ ವಿಜಯಶ್ರೀ ಹಾಲಾಡಿಯವರ ಬಾಲ್ಯದ ಹಲವು ಸಂದರ್ಭಗಳನ್ನು, ಅಂದಿನ ದಿನನಿತ್ಯದ ಬದುಕನ್ನು, ಹೆಣ್ಣುಮಗುವಿನ ತಳಮಳವನ್ನು ಇಲ್ಲಿ ಬರೆಯಲಾಗಿದೆ..

About the Author

ವಿಜಯಶ್ರೀ ಹಾಲಾಡಿ
(28 April 1975)

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು. ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) , ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ.    ...

READ MORE

Related Books