ಬಾಲಂಗೋಚಿ

Author : ಕೆ.ಬಿ. ರಂಗಸ್ವಾಮಿ

Pages 96

₹ 90.00




Year of Publication: 2019
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರಸ್ವಾಮಿ ನಿಲಯ, 1ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್ , ಶಾಂತಿನಗರ, ತುಮಕೂರು- 572102
Phone: 9886692342

Synopsys

‘ಬಾಲಂಗೋಚಿ’ ಲೇಖಕ ಕೆ.ಬಿ. ರಂಗಸ್ವಾಮಿ ಅವರು ರಚಿಸಿರುವ ಮಕ್ಕಳ ಕವನ ಸಂಕಲನ. ಮಕ್ಕಳ ಬಗೆಗಿನ ಪ್ರೀತಿ ಹಾಗೂ ಜನ್ಮಜಾತ ಪ್ರತಿಭೆ ಮತ್ತು ಆಲೋಚನೆಯಲ್ಲಿಯ ಸ್ವಂತಿಕೆಗಳ ಕಾರಣದಿಂದಾಗಿಯೇ ಈ ಕವಿ ಮಕ್ಕಳ ಪದ್ಯಗಳಷ್ಟೇ ಅಲ್ಲ ಹಲವು ಲಲಿತ ಪ್ರಬಂಧಗಳು ಕೂಡ ಪತ್ರಿಕೆಗಳಲ್ಲಿ ಅಚ್ಚಾಗಿವೆ ಎಂದು ಬೆನ್ನುಡಿಯಲ್ಲಿ ಹಿರಿಯ ಸಾಹಿತಿ ಎಸ್. ಪಿ. ಪದ್ಮಪ್ರಸಾದ್ ಬರೆದಿದ್ದಾರೆ. ಈ ಕೃತಿಯಲ್ಲಿ ಮಕ್ಕಳಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಸುಂದರ ಕವನಗಳನ್ನು ರಚಿಸಲಾಗಿದೆ.

About the Author

ಕೆ.ಬಿ. ರಂಗಸ್ವಾಮಿ

ಡಾ.ಕೆ.ಬಿ. ರಂಗಸ್ವಾಮಿ ಅವರು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್, ಎಂ.ಡಿ(ಪೀಡಿ) ಪದವೀಧರರು. ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಿರುಗವಿತೆಗಳು, ಲಲಿತ ಪ್ರಬಂಧಗಳು, ವೈದ್ಯಕೀಯ ಹಾಗೂ ವೈಚಾರಿಕ ಲೇಖನಗಳು ಮತ್ತು ಮಕ್ಕಳ ಕವನಗಳನ್ನು ರಚಿಸಿದ್ದಾರೆ.  ಸಂಗೀತ, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು. 2011 ಮತ್ತು 2012 ರ ಸುಧಾ ಯುಗಾದಿ ವಿಶೇಷಾಂಕದ ಲಲಿತ ಪ್ರಬಂಧ ಸ್ಪರ್ಧಾವಿಜೇತರಾಗಿದ್ದರು.  ‘ಕೆಲವು ಸಾಮಾನ್ಯ ಕಾಯಿಲೆಗಳು’, ‘ಗರಿಕೆ’, ‘ಹಕ್ಕಿ ಮತ್ತು ಮೋಡ’, ‘ಬೆಳದಿಂಗಳ ಹೈಕುಗಳು’, ‘ಕವಿತೆಗಷ್ಟೇ ಸಾಧ್ಯ’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಾಲಂಗೋಚಿ (ಮಕ್ಕಳ ಕವನ ಸಂಕಲನ). ...

READ MORE

Related Books