ಆದರ್ಶ ಮನುಜ

Author : ಕೋಗಿಲಹಳ್ಳಿ ಕೃಷ್ಣಪ್ಪ

Pages 72

₹ 60.00




Year of Publication: 2016
Published by: ಪ್ರಸ್ತುತ ಪ್ರಕಾಶನ
Address: #48, ಈಸ್ಟ್ ಸರ್ಕಲ್ ರಸ್ತೆ, ವಿಶ್ವೇಶ್ವರ ಪುರಂ, ಬೆಂಗಳೂರು-560004
Phone: 8147706757

Synopsys

ಕವಿ ದೊಡ್ಡರಂಗೇಗೌಡರ ಬದುಕು-ಬರೆಹ ಕುರಿತು ಕೋಗಿಲಹಳ್ಳಿ ಕೃಷ್ಣಪ್ಪ ಅವರು ಬರೆದ ಕೃತಿ-ಆದರ್ಶ ಮನುಜ. ಮಕ್ಕಳನ್ನು ಕೇಂದ್ರೀಕರಿಸಿ ಸಾಹಿತಿ ಡಾ. ದೊಡ್ಡರಂಗೇಗೌಡರ ಬದುಕಿನ ಚಿತ್ರಣ ನೀಡಲಾಗಿದೆ. ನಾಲ್ಕು ದಶಕಗಳ ಕಾಲ ನೂರಾರು ಭಾವಗೀತೆಗಳನ್ನು ಬರೆದ ಕವಿ ದೊಡ್ಡರಂಗೇಗೌಡರು ಮಕ್ಕಳಿಗೆ ಮಾದರಿ ಎನ್ನುವ ಕಾರಣಕ್ಕೆ ಇವರ ಸಾಹಿತ್ಯ ಹಾಗೂ ವ್ಯಕ್ತಿತ್ವವನ್ನು ಕಟ್ಟಿ ಕೊಡಲು  ಯತ್ನಿಸಿದ್ದಾಗಿ ಲೇಖಕ ಕೋಗಿಲುಹಳ್ಳಿ ಕೃಷ್ಣಪ್ಪ ಹೇಳಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ಗೌಡರ ಊರು-ಪರಂಪರೆ, ಬಾಲ್ಯ-ವಿದ್ಯಾಭ್ಯಾಸ, ಉದ್ಯೋಗ-ವಿವಾಹ, ವೃತ್ತಿ-ಪ್ರವೃತ್ತಿ, ಕಾವ್ಯದ ಒಳನೋಟ, ಗದ್ಯ ಸಾಹಿತ್ಯ, ಪ್ರವಾಸ ಸಾಹಿತ್ಯ, ಸಿನಿಮಾ ಸಾಹಿತ್ಯ ಹೀಗೆ ವಿವಿಧ ಶೀರ್ಷಿಕೆಗಳಡಿ ದೊಡ್ಡರಂಗೇಗೌಡರ ಬದುಕ-ಬರೆಹವನ್ನು ಸಂಕ್ಷಿಪ್ತವಾಗಿ , ಮಕ್ಕಳಿಗೆ ತಿಳಿಯುವ ಸರಳ ಭಾಷೆಯಲ್ಲಿ ಕೊಡಲಾಗಿದೆ.

About the Author

ಕೋಗಿಲಹಳ್ಳಿ ಕೃಷ್ಣಪ್ಪ
(10 July 1944)

ಕೆ.ಜಿ.ಎಫ್‌. ಮೂಲದರಾದ ಕೋಗಿಲಹಳ್ಳಿ ಕೃಷ್ಣಪ್ಪ ಅವರು ಭರತ್‌ನಗರದ ಬಿಇಎಂಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 13 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಂಗಾರಪೇಟೆ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿದ್ದ ಕೋಗಿಲಹಳ್ಳಿ ಕೃಷ್ಣಪ್ಪ, ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.  ...

READ MORE

Related Books