
ಎ.ಓ. ಆವಲಮೂರ್ತಿ ಅವರು ಬರೆದ ಕೃತಿ-ನಮಗೆ ಕನಸುಗಳು ಬೀಳುವುದೇಕೆ? ಮಕ್ಕಳಿಗಾಗಿ ಬರೆದ ಕೃತಿಯಾದರೂ ದೊಡ್ಡವರಿಗೂ ಈ ವಿಷಯ ಕುತೂಹಲಕಾರಿ. . ಮಕ್ಕಳನ್ನು ಚಿಂತನಶೀಲರನ್ನಾಗಿಸುವ ಮತ್ತು ಹೊಸ ಆವಿಷ್ಕಾರಗಳ ತಮ್ಮನ್ನು ತೊಡಗಿಸುವಂತೆ ಮಾಡುವ ಉದ್ದೇಶ ಇಂತಹ ಕೃತಿಗಳ ರಚನೆ ಹಿಂದಿದೆ.
ಕಣ್ಣು ಕೋರೈಸುವ ಮಿಂಚು ಹೇಗೆ ಉತ್ಪತ್ತಿಯಾಗುತ್ತದೆ? ಬೆಳಕಿನ ಹಿಂದಿನ ಶಕ್ತಿ ಯಾವುದು? ನೀರನ್ನು ಕುದಿಸಿದರೆ ಉಕ್ಕುವುದಿಲ್ಲ, ಆದರೆ, ಹಾಲು ಉಕ್ಕುತ್ತದೆ ಏಕೆ? ಕಾಮನ ಬಿಲ್ಲು ಹೇಗೆ ಮೂಡುತ್ತದೆ? ಕಪ್ಪೆಚಿಪ್ಪಿನಲ್ಲಿ ಮುತ್ತು ಹೇಗೆ ಆಗುತ್ತದೆ? ರಾಹುಕಾಲ ಎಂದರೆ ಏನು? ನಮಗೆ ಕನಸುಗಳು ಏಕೆ ಬೀಳುತ್ತವೆ? ಹೀಗೆ, ಮಕ್ಕಳ ಕುತೂಹಲದ ಪ್ರಶ್ನೆಗಳಿಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.