ಅಂಕಪಟ್ಟಿ ಬಾಲ್ಯ

Author : ರವಿರಾಜ್ ಸಾಗರ್

Pages 104

₹ 130.00




Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾವ, ಕಮಲಾಪುರ, ಕಲಬುರಗಿ
Phone: 9980952630

Synopsys

ಮಕ್ಕಳಿಗೆ ಚಟುವಟಿಕೆಯ ಚುರುಕು ಮತ್ತು ಉಲ್ಲಾಸವನ್ನು ಹೆಚ್ಚಿಸುವ ಕವನಗಳು ಈ ಸಂಕಲನದಲ್ಲಿ ಅಡಕವಾಗಿವೆ. ದೊಡ್ಡವರೆನಿಸಿಕೊಂಡವರು ಮಾಡಿರುವ ಅವಸ್ಥೆ, ಪರಿಸರಕ್ಕೆ ಮಾಡಿರುವ ಅನಾಚಾರವನ್ನು, ಹಕ್ಕಿ-ಹಳ್ಳಗಳ ಕಲರವವನ್ನು ಇಲ್ಲಿ ಲೇಖಕರು ಮಕ್ಕಳಿಗೆ ಮನ ಮುಟ್ಟುವಂತೆ ಸರಳವಾಗಿ ಕವನ ಎಣೆದಿದ್ದಾರೆ. ಈ ಸಂಕಲನದ ಒಂದು ಕವಿತೆಯ ಸಾಲು ಹೀಗಿದೆ

‘ಚಿಲಿಪಿಲಿ ಹಕ್ಕಿಗಳು

ನಾವು ಚಿಲಿಪಿಲಿ ಹಕ್ಕಿಗಳು

ಸಾವಿ ಕನಸು ನಮಗೂ ಉಂಟು

ಸ್ವತಂತ್ರ ಬದುಕಿನ ಬಯಕೆ ಉಂಟು

ನಾಳೆಯ ಬಗ್ಗೆ ಭರವಸೆ ಉಂಟು

ನಿಮಗೇಕೆ ಸುಮ್ನೆ ಟೆನ್ಸನ್ನು....’

ಇಂತಹ ಕವನಗಳ ಹಿಂದೆ ಸಾಮಾಜಿಕ ಹೊಣೆಗಾರಿಕೆ ಹಾಗೂ ಎಚ್ಚರಿಕೆಯನ್ನೂ ಕಾಣಬಹುದು.

About the Author

ರವಿರಾಜ್ ಸಾಗರ್
(19 July 1986)

ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.   ಕಾಲೇಜು ದಿನಗಳಿಂದಲೇ  ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳು ಹೊರತರುತ್ತಿರುವ ಮಂದಾರ ಕನ್ನಡ ಮಕ್ಕಳ ಪತ್ರಿಕೆಯನ್ನು ಸಂಪಾದಕರು ...

READ MORE

Related Books