‘ಅಳಿಲುಸೇವೆ’ ಎಚ್. ಡುಂಡಿರಾಜ್ ಅವರ ಹನಿಗವನಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಹಾಮಾನಾ ಅವರು, ನಿಜ ಹೇಳಬೇಕೆಂದರೆ ನೀವು ನಮ್ಮ ಹನಿಗವಿತೆಗಳ ಸಾಮ್ರಾಟರು. ಒಮ್ಮೆ ದಿನಕರ ದೇಸಾಯಿ ಚುಟುಕುಗಳ ಸಾಮ್ರಾಟರಾಗಿದ್ದರು. ಈಗ ನೀವು ಆ ಸ್ಥಾನವನ್ನು ಗಳಿಸಿದ್ದೀರಿ ಎನ್ನುತ್ತಾರೆ. ತುಂಬ ಲಲಿತವಾದ ಬರವಣಿಗೆ, ಅದರಲ್ಲಿ ಅನಿರೀಕ್ಷಿತವಾದ ತಿರುವು; ಪದಗಳೊಂದಿಗೆ ನೀವು ಆಡುವ ಆಟ, ಅವುಗಳಿಂದ ಹೊರಡಿಸುವ ವಿನೂತನ ಅರ್ಥ-ಹೀಗೆ ನಿಮ್ಮ ಬರವಣಿಗೆ ಮನಸ್ಸಿಗೆ ವಿನೂತನವಾದ ಆಹ್ಲಾದವನ್ನು ನೀಡುತ್ತದೆ. ನಿಮ್ಮ ಕವಿತೆಗಳನ್ನು ಓದುವುದು ನನಗೆ ಯಾವಾಗಲೂ ಸಂತೋಷದ ಸಂಗತಿ ಎಂದಿದ್ದಾರೆ.
ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ. ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. 2011ರಲ್ಲಿ ನಡೆದ ಸಂಯುಕ್ತ ಅರಬ್ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...
READ MORE