ಮಕ್ಕಳ ಹೊಸ ಕಾವ್ಯ

Author : ಬಸು ಬೇವಿನಗಿಡದ

Pages 228

₹ 140.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು
Phone: 08022107704

Synopsys

ಸಾಹಿತ್ಯ ಪ್ರಕಾರದಲ್ಲಿಯೇ ಅತ್ಯಂತ ವಿಶಿಷ್ಟವಾದುದು ಮಕ್ಕಳ ಸಾಹಿತ್ಯ. ಮುಗ್ಧಲೋಕವೊಂದನ್ನು ಅಕ್ಷರಗಳಲ್ಲಿ ಪಡಿಮೂಡಿಸಲು ಬೇರೊಂದು ರೀತಿಯ ಪ್ರತಿಭೆ ಅಗತ್ಯವಿದೆ. ಹಾಗೆಂದೇ ಎಲ್ಲರೂ ಮಕ್ಕಳ ಸಾಹಿತಿಗಳಾಗಲು ಸಾಧ್ಯವಿಲ್ಲ.

ಮಕ್ಕಳ ಬಗ್ಗೆ ಇತ್ತೀಚೆಗೆ ಬಂದ ಕಾವ್ಯವನ್ನೆಲ್ಲಾ ಒಂದೆಡೆ ಸೇರಿಸಿ ಡಾ. ಶ್ರೀನಿವಾಸ ಉಡುಪ, ಡಾ. ಆನಂದ ಪಾಟೀಲ ಹಾಗೂ ಡಾ. ಬಸು ಬೇವಿನಗಿಡದ ನೀಡಿದ್ದಾರೆ. ಪ್ರಾತಿನಿಧಿಕ ಕವನಗಳೇ ಇರುವುದರಿಂದ ಇದೊಂದು ಮಹತ್ತರ ಕೃತಿ ಎನ್ನುವುದರಲ್ಲಿ ಸಂಶಯವಿಲ್ಲ. 

About the Author

ಬಸು ಬೇವಿನಗಿಡದ
(12 July 1964)

ಕಥೆಗಾರ  ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ  (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ ...

READ MORE

Related Books