ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ

Author : ಮಾಲಿನಿ ಮಲ್ಯ

Pages 362

₹ 180.00




Year of Publication: 2012
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯವನ್ನು ಮಾಲಿನಿ ಮಲ್ಯ ಅವರು ಸಂಪಾದಿಸಿದ್ದು, ಈ ಕೃತಿಯಲ್ಲಿ ಮಕ್ಕಳ ಕುರಿತಂತೆ ವಿವಿಧ ಸಾಹಿತ್ಯ ಕೃತಿಗಳನ್ನು ಬರೆದ ಕಾರಂತರ ಬರೆಹಗಳನ್ನು ಸಂಪಾದಿಸಲಾಗಿದೆ. ಕಾರಂತರ ಕುರಿತು ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿದೆ. ಚಿತ್ರಕಲೆ, ಫೋಟೋಗ್ರಫಿ, ಮುದ್ರಣ, ಸಿನಿಮಾ, ಸಂಗೀತ, ಯಕ್ಷಗಾನ, ಪಕ್ಷಿವೀಕ್ಷಣೆ ಮುಂತಾದ ಇನ್ನೂ ಹಲವು ಕ್ಷೇತ್ರಗಳಲ್ಲಿ ಅವರಿಗೆ ತೀವ್ರ ಆಸಕ್ತಿ, ಆಳವಾದ ಪರಿಶ್ರಮ ಇತ್ತು. ಮಾಲಿನಿ ಮಲ್ಯ ಅವರು ಸಂಪಾದಿಸಿ ಕೊಟ್ಟಿರುವ ಈ ಕೃತಿ ಶಿವರಾಮ ಕಾರಂತರ ಸಮಗ್ರ ಸಾಹಿತ್ಯದಿಂದ ಆರಿಸಿರುವ ಅತ್ಯುತ್ತಮ ಬರಹಗಳ ಒಂದು ಅಮೂಲ್ಯ ಭಂಡಾರವಾಗಿದೆ.

About the Author

ಮಾಲಿನಿ ಮಲ್ಯ
(29 June 1951)

ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ,  ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...

READ MORE

Related Books