ಅಮ್ಮನ ಸಿಟ್ಟು

Author : ಅಂತಃಕರಣ

Pages 1

₹ 45.00




Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು-577 418, ಹೊಸನಗರ ತಾಲ್ಲೂಕು, ಶಿವಮೊಗ್ಗ

Synopsys

ಐದನೆಯ ತರಗತಿಯ ಕಿಶೋರ ಸಾಹಿತಿ ಅಂತಃಕರಣ ಭರವಸೆ ಮೂಡಿಸುವ ಕವಿ-ಲೇಖಕ. ಅಂತಃಕರಣ ಬರೆದ 40 ಕವಿತೆಗಳು ’ಅಮ್ಮನ ಸಿಟ್ಟು’ ಸಂಕಲನದಲ್ಲಿವೆ. ಈ ಸಂಕಲನದ ಕವಿತೆಗಳ ಬಗ್ಗೆ ಕವಯತ್ರಿ ಜ್ಯೋತಿ ಆರ್‌. ಗುರುಪ್ರಸಾದ್ ಅವರು ’ಕವನ ಕಟ್ಟುವಿಕೆಯನ್ನು ಸಂಭ್ರಮಿಸುವ ಅಂತಃಕರಣನ ಸ್ಫೂರ್ತಿ ಆಧುನಿಕತೆಯ ಯಾಂತ್ರಿಕತೆಯಿಂದ ವಿಚಲಿತವಾಗದೆ ಅವುಗಳಿಂದ ತನಗಾಗಿರುವ ಪರಿಣಾಮವನ್ನು ಮುಗ್ಧವಾಗಿ ಮೆಚ್ಚಿಕೊಳ್ಳುತ್ತಾ ಹೋಗುವುದು ಬಾಲಕನೊಬ್ಬನ ಆತ್ಮಕಥೆಯ ಮೆಲುದನಿಯಂತೆ ಕೇಳಿಸುತ್ತದೆ. ಈ ಮೆಲುದನಿ ಅಮ್ಮನ ಸಿಟ್ಟನ್ನೂ ವಿಮರ್ಶಿಸುತ್ತಲೇ ಗಟ್ಟಿಯಾಗುತ್ತದೆಂಬುದೇ ಈ ಸಂಕಲನದ ಹೆಗ್ಗಳಿಕೆ.

ಇವನ ಅಮ್ಮನ ನಿಸ್ಸಹ ದುಡಿಮೆ, ದೊಡ್ಡತ್ತೆಯ ಕೈಯ ಅಡಿಗೆ ರುಚಿ, ಸ್ನೇಹಿತ ತಾನು ಓದುವ ಶಾಲೆಯನ್ನು ಬಿಟ್ಟು ಹೋದಾಗ ಆಗಿರುವ ಬೇಸರ, ಇವನ ತಾತ, ಅಪ್ಪ, ಅಣ್ಣ, ತಮ್ಮ, ಶಾಲೆ, ಊರು, ಎಲ್ಲವೂ ಇವನ ಕವನದ ವಸ್ತುಗಳಾಗುವ ಹಾಗೆ ಬಸ್ಸು, ಕಾರು, ತುಂತುರು ಎಂಬ ಮಕ್ಕಳ ಕನ್ನಡ ಪತ್ರಿಕೆ ಹಾಗೂ ಟಿಂಕಲ್' ಎಂಬ ಇಂಗ್ಲಿಷ್ ಭಾಷೆಯ ಮಕ್ಕಳ ಪತ್ರಿಕೆಗೂ ಇವನು ಋಣಿಯಾಗಿರುವ ಪರಿ ಇವನ ಎಳೆಯ ಮನಸಿನ ಅಂತಃಕರಣದ ಎಳೆಗಳಾಗಿ ಸುಂದರವಾಗಿ ಬಿಡಿಸಿಕೊಳುತ್ತತ ಇವನ ಮುಗ್ಧ ಪ್ರಪಂಚವನ್ನು ಆಳುತ್ತದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books