ನನ್ನ ಸೈಕಲ್ ಸವಾರಿ

Author : ಗಿರೀಶ ಜಕಾಪುರೆ

Pages 104

₹ 100.00




Year of Publication: 2014
Published by: ಪೂರ್ವಶ್ರೀ ಪ್ರಕಾಶನ
Address: 1765, ಶಾರದಾ ನಿವಾಸ, ಪೋ: ಮೈಂದರ್ಗಿ, ಜಿ : ಸೊಲ್ಲಾಪುರ
Phone: 8999906965

Synopsys

ಓದುತ್ತ, ಆಡುತ್ತ, ನಲಿಯುತ್ತ, ಕಲಿಯುತ್ತ ಬೆಳೆಯುತ್ತಿರುವ ಮಕ್ಕಳಿಗಾಗಿ ಬರೆದ ಇಲ್ಲಿನ ಕವಿತೆಗಳು ಅತ್ಯಂತ ಗೇಯತೆಯಿಂದ ಕೂಡಿವೆ. ಮೋಬೈಲ್, ಕಂಪ್ಯೂಟರ್, ವ್ಹಿಡಿಯೋಗೇಮ್‌ಗಳಲ್ಲಿ ಕಳೆದುಹೋಗುತ್ತಿರುವ ಬಾಲ್ಯಕ್ಕೆ ಒಂದಿಷ್ಟು ಕ್ರಿಯಾಶೀಲತೆ, ಚಟುವಟಿಕೆಯ ಮೂಲಕ ಹಾಡುವ ಆಡುವ ಸಂಕಲ್ಪವನ್ನಿಟ್ಟುಕೊಂಡ ಕೃತಿಯಿದು. ಮಹಾರಾಷ್ಟ್ರ ಕರ್ನಾಟಕದ ಸೀಮಾವರ್ತಿ ಪ್ರದೇಶದ ಜನರು ಮಾತಾಡುವ ಭಾಷೆಯಲ್ಲಿನ ಇಲ್ಲಿನ ಕವಿತೆಗಳು ಜವಾರಿ ಮಾತಿನ ಸೊಗಡನ್ನು ಹೊಂದಿವೆ. ಈ ಕೃತಿಯಲ್ಲಿ ಒಟ್ಟು 50 ಪದ್ಯಗಳಿದ್ದು ಇವು ಹಳ್ಳಿಯ ಪರಿಸರ, ಶಾಲಾ ಮಕ್ಕಳ ಕಿತಾಪತಿಗಳು, ಅವರ ಇಷ್ಟದ ಸಾಕು ಪ್ರಾಣ ಗಳು, ದಿನಾಲೂ ಕಾಣುವ ಪೋಸ್ಟ್‌ಮನ್, ತರಕಾರಿ ಮಾರುವ ಅಜ್ಜಿ, ಹಕ್ಕಿ-ಪಕ್ಷಿಗಳು, ರಜೆದಿನಗಳ ಮೋಜು, ಸೈಕಲ್ ಕಲಿಯುವ, ಈಜು ಕಲಿಯುವ ಪ್ರಸಂಗಗಳು, ಗೆಳೆಯರಲ್ಲಿನ ಚೇಷ್ಟೆಗಳು ಈ ಕವಿತೆಗಳಲ್ಲಿ ಪಾತ್ರಗಳಂತೆ ಸಂಚರಿಸುವುದು ಕಂಡುಬರುತ್ತದೆ. ಮಕ್ಕಳ ಮನೋವಿಕಾಸದೊಂದಿಗೆ ಅವರ ಕಲ್ಪನಾಶಕ್ತಿಗೂ ಇಂಬುನೀಡುವ ಇಲ್ಲಿನ ಕವಿತೆಗಳು ಅವರ ಮನಸ್ಸನ್ನು ಹಗುರ ಮಾಡುತ್ತವೆ. ಈ ಕೃತಿಯಲ್ಲಿ ಬಳಸಲಾದ ಒಳಚಿತ್ರಗಳು ಕವಿತೆಗಳಿಗೆ ಇನ್ನಷ್ಟು ಸಂವಹನಶೀಲತೆಯನ್ನು ಒದಗಿಸಿವೆ. ಈ ಕೃತಿಗೆ ಡಾ. ಬಸುಬೇವಿನಗಿಡದ ಅವರು ಮುನ್ನುಡಿಯನ್ನು ಬರೆದಿದ್ದು, ಡಾ. ಆನಂದ ಪಾಟೀಲರ ಬೆನ್ನುಡಿಯಿದೆ. 

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Awards & Recognitions

Related Books