ಅನುಭಾವದಡಿಗೆ

Author : ಸಿದ್ಧರಾಮ ಸ್ವಾಮಿಗಳು

Pages 216

₹ 150.00




Year of Publication: 2018
Published by: ಅಖಿಲ ಭಾರತ ಶೆರಣ ಸಾಹಿತ್ಯ ಪರಿಷತ್ತು
Address: ಮೈಸೂರು

Synopsys

’ಅನುಭಾವದಡಿಗೆ’ ಕೃತಿಯು ಸಿದ್ಧರಾಮ ಸ್ವಾಮಿಗಳ ನೂರೊಂದು ಅಮೃತವಾಕ್ಕುಗಳಾಗಿವೆ. ಈ ಕೃತಿಯ ಕುರಿತು ಬಸವರಾಜ ಸಬರದ ಅವರು, `ಧಾರ್ಮಿಕವೆಂಬಂತೆ ತೋರಿದರೂ, ಮಾನವಸಮಾಜದ ಎಲ್ಲ ವರ್ಗಗಳ ಜನರ ಅರಿವಿನ ಪರಿಧಿಯನ್ನು ವಿಸ್ತರಿಸಬಲ್ಲ ವೈವಿಧ್ಯಮಯ, ವೈಚಾರಿಕ ಬರಹಗಳಿಂದ ಕೂಡಿದ ಈ ಅಂಕಣವು ಓದುಗರಿಗೆ ಅನುಭವ ಮತ್ತು ಅನುಭಾವದ ತಾತ್ವಿಕತೆಯನ್ನು ನಿತ್ಯ ಧಾರೆಯೆರೆಯುತ್ತಿದೆ. ವಿವಿಧ ಧರ್ಮಗಳ ವೈಚಾರಿಕ ಸಿದ್ಧಾಂತಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರುವ ಹಾಗೂ ಆಯಾ ಧರ್ಮಗಳ ಮಾನವೀಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕುತ್ತಿರುವ ಅನುಭವಿ ಬರಹಗಾರರ ತಂಡವನ್ನೇ ಗುರುತಿಸಿರುವ ಪ್ರಜಾವಾಣಿಯ ಸಂಪಾದಕ ಮಂಡಳಿಯು, ಅವರಿಂದ ನಿತ್ಯವೂ ಇಂತಹ “ಅನುಭಾವದಡಿಗೆ’ಯನ್ನು ಬಡಿಸುತ್ತ ಬಂದಿದೆ. ಪತ್ರಿಕೆಯ ಪ್ರಸಾರದ ಸಂಖ್ಯೆಗೆ ಇದು ಎಷ್ಟು ಸಹಕಾರಿಯಾಗಿದೆಯೋ ಗೊತ್ತಿಲ್ಲ. ಆದರೆ ಪತ್ರಿಕೆಯೊಂದರ ಸಾಮಾಜಿಕ ಸ್ವಾಸ್ಥ್ಯದ ಕಾಳಜಿ ಇದು ಜೀವಂತ ಸಾಕ್ಷಿಯಾಗಿದೆ. ಅದರಲ್ಲೂ ಪರಂಪರಾಗತ ಮೂಲಭೂತವಾದಕ್ಕೆ ಪ್ರಬಲ ಪ್ರತಿಭಟನೆಯೊಡ್ಡಿದ ಕ್ರಾಂತಿಕಾರಿ ಧರ್ಮಗಳ ವೈಚಾರಿಕ ಸಿದ್ಧಾಂತಗಳನ್ನು ಕಟ್ಟಿಕೊಡುವ ಈ ಅಂಕಣವು ವಿಚಾರಕ್ರಾಂತಿಗೆ ಮುನ್ನುಡಿ ಹಾಡುತ್ತಿರುವುದು ಒಂದು ವಿಶೇಷ ಬೆಳವಣಿಗೆ, ಧರ್ಮ ಮತ್ತು ವೈಚಾರಿಕತೆ ಎರಡೂ ಸಮ್ಮಿಳಿತವಾಗಿರುವ ಈ ಅಂಕಣವು ಓದುಗರಲ್ಲಿ ಹೊಸ ಪ್ರಜೆಯೊಂದರ ಜಾಗೃತಿಯನ್ನುಂಟು ಮಾಡುತ್ತಿರುವುದು ಅರ್ಥಪೂರ್ಣ ಮತ್ತು ಅನನ್ನ ಬೆಳವಣಿಗೆ ಈ ಅಂಕಣದ ಬರಹಗಾರರಲ್ಲಿ ಒಬ್ಬರು, ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಸಿದ್ದರಾಮ ಸ್ವಾಮಿಗಳು, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನಿಂದ ಆರಂಭವಾದ ಶರಣಧರ್ಮದ ಕ್ರಾಂತಿಕಾರಿ ಹಾಗೂ ಕ್ರಿಯಾತ್ಮಕ ಸಿದ್ಧಾಂತಗಳನ್ನು ತಮ್ಮ ನಿತ್ಯದ ನಡೆಯನ್ನಾಗಿ ಮಾಡಿಕೊಂಡಿರುವ ಅವರು ಕರ್ನಾಟಕದ ವೈಚಾರಿಕ ಧರ್ಮಗುರುಗಳಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಧಾರ್ಮಿಕ ಪರಂಪರೆಯ ಒಳ-ಹೊರಗನ್ನು ಆಳವಾಗಿ ಅಧ್ಯಯನ ಮಾಡಿರುವ ಪೂಜ್ಯ ಸ್ವಾಮೀಜಿಯವರು ಆ ಪರಂಪರೆಗೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದ ಶರಣರು ತೋರಿದ ಪ್ರತಿಭಟನೆ ಮತ್ತು ಪ್ರತಿಭಟನೆಯ ಪರಿಣಾಮವಾಗಿ ರೂಪುಗೊಂಡ ಶರಣಧರ್ಮವು ಹೇಗೆ ಇಡೀ ವಿಶ್ವದಲ್ಲಿ ಶ್ರೇಷ್ಠವಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿತು ಎಂಬುದನ್ನು ತಾತ್ವಿಕ ನೆಲೆಗಟ್ಟಿನ ಮೇಲೆ ಅಂತವರು, ಅರಿಯುವುದಷ್ಟೇ ಅಲ್ಲ, ಅದರಂತೆ ನಡೆದವರು ಕೂಡ. ಹೀಗಾಗಿ ಅವರ ನಡೆ ಮತ್ತು ನಡೆಗೆ ತಕ್ಕಂತಿರುವ ನುಡಿ, ಶರಣಧರ್ಮದ ಕ್ರಿಯಾತ್ಮಕ ಆಚರಣೆಗಳಾಗಿವೆ, ಸರ್ವಸ್ವವನ್ನೂ ಜಂಗಮಗೊಳಿಸುವ ದಿಟ್ಟ ಹೆಜ್ಜೆಯಿಟ್ಟ ಶರಣರ ಬದುಕು ಮತ್ತು ಅಭಿವ್ಯಕ್ತಿಯ ಸಾರರೂಪವಾಗಿರುವ ವಚನಗಳನ್ನು ಆಳವಾಗಿ ಅಭ್ಯಸಿಸಿರುವ ಡಾ. ಸಿದ್ದರಾಮ ಸ್ವಾಮಿಗಳು, ತಮ್ಮ ಮಠದ ಸೈದ್ಧಾಂತಿಕತೆಯನ್ನು ವಚನಸತ್ವಗಳ ಆಸ್ತಿವಾರದ ಮೇಲೆಯೇ ನಿರ್ಮಿಸಿಕೊಂಡವರು, ಹೀಗಾಗಿಯೇ, ಅವರು ಕನ್ನಡ ನಾಡಿನ ಪ್ರಗತಿಪರ ಸ್ವಾಮಿಗಳೆಂದೇ ಹೆಸರಾಗಿದ್ದಾರೆ’ ಎಂದಿದ್ದಾರೆ.

About the Author

ಸಿದ್ಧರಾಮ ಸ್ವಾಮಿಗಳು
(12 December 1958)

ಪ್ರಸ್ತುತ ಯಡಿಯೂರು ಗದಗ ಡಂಬಳ್ ಮಠದ ಪೀಠಾಧಿಪತಿಯಾಗಿರುವ ಜಗದ್ಗುರು ಶ್ರೀ ಸಿದ್ಧರಾಮ ಸ್ವಾಮೀಜಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು. ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂಎ ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಂಗ ಪಡೆದುಕೊಂಡರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು. ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಹಿಂದಿನ ಮಠಾಧೀಶರ ...

READ MORE

Related Books