ಶ್ರೀ ಶಂಕರಚಾರ್ಯ

Author : ನಚಿಕೇತ್ ಹೆಗಡೆ

Pages 140

₹ 160.00
Year of Publication: 2024
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

‘ಶ್ರೀ ಶಂಕರಚಾರ್ಯ’ ನಚಿಕೇತ್ ಹೆಗಡೆ ಅವರ ಕೃತಿಯಾಗಿದೆ. ಈ ಕೃತಿ ಕುರಿತು ಲೇಖಕರು ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ; ಭರತಖಂಡದಲ್ಲಿ ಸನಾತನಧರ್ಮ ಕ್ಷೀಣವಾಗಿ ಇನ್ನೇನು ನಶಿಸಿಹೋದೀತೇನೋ ಎಂಬ ದುಃಸ್ಥಿತಿಯಲ್ಲಿದ್ದಾಗ ಅದನ್ನು ಪುನಶ್ವೇತನಗೊಳಿಸಿ ಆಚಂದ್ರಾರ್ಕ ಬೆಳಗುವಂತೆ ಮಾಡಿದ ಮಹಾಪುರುಷರು ಶ್ರೀ ಶಂಕರಾಚಾರ್ಯರು. ಅವರು ಭೌತಿಕಶರೀರದಲ್ಲಿ ಭೂಮಿಯ ಮೇಲೆ ನಡೆದಾಡಿದ್ದು ಕೇವಲ 32 ವರ್ಷಗಳಿರಬಹುದು ಆದರೆ ಭಾರತದ ಅಧ್ಯಾತ್ಮ, ಧರ್ಮ, ತತ್ತ್ವಜ್ಞಾನಗಳ ಅವಕಾಶದಲ್ಲಿ ಇಂದಿಗೂ ಪ್ರಸ್ತುತರಾಗಿ ಉಳಿದಿದ್ದಾರೆ. ತನ್ನ ಜೀವಿತದಲ್ಲಿ ಆಚಾರ್ಯ ಶಂಕರರು ಭಾರತದ ಉದ್ದಗಲ ಪರ್ಯಟನೆ ಮಾಡಿದರು, ಕಾಶ್ಮೀರದಲ್ಲಿ ಸರ್ವಜ್ಞಪೀಠವನ್ನೇರುವ ಅರ್ಹತೆ ಮೆರೆದರು. ಮಹಾಮಹಾ ಪಂಡಿತರನ್ನೂ ತತ್ತ್ವವೇತ್ತರನ್ನೂ ಮಣಿಸಿ ತಮ್ಮ ಸಿದ್ಧಾಂತದ ಪ್ರಚಾರಕಾರ್ಯ ಮಾಡಿದರು. ಆಮ್ನಾಯಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮಕ್ಕೆ ಚಿರಂತನವಾದ ನೆಲೆ ಕಲ್ಪಿಸಿದರು. ಇನ್ನೇನು ಕಣ್ಮುಚ್ಚಿತೇನೋ ಎಂಬಂತಿದ್ದ ಜ್ಞಾನಮಾರ್ಗಕ್ಕೆ ಕಾಯಕಲ್ಪ ನೀಡಿದರು. ಒಟ್ಟಾರೆಯಾಗಿ ಭಾರತದ ಕುಂಡಲಿನಿಯನ್ನು ಜಾಗೃತಗೊಳಿಸಿದರು. ಶಂಕರರ ಜೀವನ, ಸಾಧನೆ, ಸಂದೇಶಗಳನ್ನು ಭಾರತ ಇಂದು ಮೆಲುಕುಹಾಕಬೇಕಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು ಎನ್ನುತ್ತಾರೆ.

Related Books