ಲಿಂಗಲೀಲಾವಿಲಾಸ ಚರಿತ್ರ

Author : ಸಂ.ಶಿ. ಭೂಸನೂರಮಠ

Pages 497

₹ 5.00




Year of Publication: 1956
Published by: ಶ್ರೀ ನಿ. ಪ್ರ. ಸ್ವಾ. ಮೃತ್ಯುಂಜಯ ಮಹಾಸ್ವಾಮಿಗಳು
Address: ಮುರುಘಾ ಮಠ ಹಾವೇರಿ ಪೇಟೆ, ಮನೆ ನಂ 7668, ಧಾರವಾಡ

Synopsys

15ನೆಯ ಶತಮಾನದಲ್ಲಿ ಇದ್ದ ಕಲ್ಲುಮಠದ ಪ್ರಭುಲಿಂಗದೇವರು ವಿರಚಿಸಿದ ಈ ಕೃತಿಯನ್ನು ಸಂ.ಶಿ. ಭೂಸನಮಠ ಅವರ ಸಂಪಾದಿಸಿದ್ದಾರೆ. ಲಿಂಗಲೀಲಾವಿಲಾಸ ಚರಿತ್ರ ಎಂದರೆ, ಶರಣ ಚಾರಿತ್ರೆ, ಶರಣ ಮಾರ್ಗ. ಕನ್ನಡ ಸಾಹಿತ್ಯದ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ಕನ್ನಡಿಗರ ಕರ್ತವ್ಯ. ಅದರಲ್ಲಿಯೂ ಮಾನವ ಜೀವನದ ಪರಮ ಧೈಯವನ್ನು ಸಾಧಿಸಿ, ಅನುಭವಿಸಿ, ತಮ್ಮ ಅನುಭವವನ್ನು ಮಾನವ ಕುಲಕ್ಕೆ ನೀಡಿದ ಶಿವಶರಣರ ವಚನಗಳನ್ನು, ಅವರ ದಿವ್ಯ ಜೀವನವನ್ನು ಕುರಿತಿರುವ ಚರಿತೆಗಳನ್ನು ಕಾದುಕೊಂಡು ಹೋಗುವುದು ನಮ್ಮ ಪವಿತ್ರ ಕರ್ತವ್ಯ ಎಂಬ ನಿಲುವಿನೊಂದಿಗೆ ಲಿಂಗಲೀಲಾವಿಲಾಸ ಚರಿತ್ರವನ್ನು ಸಂಪಾದಿಸಿ ಸಿದ್ಧಪಡಿಸಲಾಗಿದೆ.

About the Author

ಸಂ.ಶಿ. ಭೂಸನೂರಮಠ
(07 November 1910 - 06 November 1991)

ಕನ್ನಡ ಸಂಪಾದನಾ ಶಾಸ್ತ್ರಕ್ಕೆ ಬುನಾದಿ ಹಾಕಿದ ಸಂ.ಶಿ. ಭೂಸನೂರಮಠರು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ನಿಡಗುಂದಿ ಗ್ರಾಮದವರು. ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠರು 1910ರ ನವೆಂಬರ್ 7ರಂದು. ತಂದೆ ಶಿವಮೂರ್ತಯ್ಯ, ತಾಯಿ ರಾಚಮ್ಮ. ಕಡುಬಡತನದ ಕುಟುಂಬದಲ್ಲಿ ಜನಿಸಿದ ಸಂಗಯ್ಯ ಅವರು ಆರಂಭಿಕ ಶಿಕ್ಷಣವನ್ನು ನಿಡಗುಂದಿಯಲ್ಲಿ ಪಡೆದರು. ಮಾಧ್ಯಮಿಕ ಶಿಕ್ಷಣವನ್ನು ಗದುಗಿನಲ್ಲಿ ಪಡೆದ ಅವರು ಹಣಕಾಸಿನ ತೊಂದರೆಯಿಂದಾಗಿ ಓದು ನಿಲ್ಲಿಸಬೇಕಾದ ಸಂದರ್ಭ ಎದುರಾಯಿತು. ಎದೆಗುಂದದ ಅವರು ಪೆಟ್ರೋಲ್ ಬಂಕ್ ನಲ್ಲಿ ಪಂಪ್ ಒತ್ತುವ ಕೆಲಸ ಮಾಡಿ ಮ್ಯಾಟ್ರಿಕ್ ಮುಗಿಸಿದರು. ನಂತರ 1931ರಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ...

READ MORE

Related Books