ಗೀತೆಯ ಗುಟ್ಟು ಅಥವಾ ಪರಮಾತ್ಮ ಯೋಗವು

Author : ರಂಗನಾಥ ದಿವಾಕರ

Pages 309

₹ 1.00




Year of Publication: 1928
Published by: ರಂಗನಾಥ ರಾಮಚಂದ್ರ ದಿವಾಕರ
Address: ಅಧ್ಯಾತ್ಮ ಕಾರ್ಯಾಲಯ, ಧಾರವಾಡ

Synopsys

ಗೀತೆಯ ಗುಟ್ಟು ಅಥವಾ ಪರಮಾತ್ಮ ಯೋಗವು-ಕೃತಿಯನ್ನು ರಂಗನಾಥ ದಿವಾಕರ ಅವರು ಬರೆದಿದ್ದಾರೆ. ಜೀತೇಂದ್ರಿಯನಾಗಬೇಕು. ವಿಷಯಾನಂದವನ್ನು ತೊರೆದು ಆತ್ಮಾನಂದವನ್ನು ಪಡೆಯಲು ಹಂಬಲಿಸಬೇಕು. ಅಹಂ ಅಳಿದು ಪರಮಾತ್ಮನಿಗೆ ಸರ್ವಸ್ವವನ್ನು ಸಮರ್ಪಿಸಿಕೊಳ್ಳಬೇಕು ಎಂಬುದು ಗೀತೆಯ ಮುಖ್ಯ ಸಾರ. ಗೀತೆಯೂ ಸದ್ಯದ ಸ್ಥಿತಿಯೂ, ಗೀತೆಯೂ ಕರ್ನಾಟಕವೂ, ಗೀತೆಯೂ ಮಹಾತ್ಮವೂ.. ಹೀಗೆ ವಿವಿಧ ವಿಷಯಗಳೊಂದಿಗೆ ಅಂತರ್‍ ಶಿಸ್ತೀಯವಾಗಿ ಅಧ್ಯಯನಕ್ಕೊಳಪಡಿಸಿದ ಮಹತ್ವದ ಕೃತಿ ಇದು. ಗೀತೆಯು ಸರ್ಕಾವವನ್ನೂ ತ್ಯಾಗ ಮಾಡಿ ಕಾಡು ಸೇರಿ ಎಂದು ಹೇಳುವುದಿಲ್ಲ. ಕರ್ಮ ಸನ್ಯಾಸವನ್ನು ತೆಗೆದುಕೊಳ್ಳಬೇಕು ಎಂದು ಹೇಳುವುದಿಲ್ಲ. ನಿಮಗೆ ಆತ್ಮಾನಂದವನ್ನು ಮಾಡುತ್ತೇನೆ. ಇಂತಿಂಥಹ ಮಾರ್ಗ ಅನುಸರಿಸಿರಿ ಎಂದು ಮಾರ್ಗದರ್ಶನ ಮಾಡುತ್ತದೆ . ಇಂತಹ ವಿಚಾರ-ಚಿಂತನೆಗಳು ಕೃತಿಯಲ್ಲಿ ಒಳಗೊಂಡಿದೆ.

About the Author

ರಂಗನಾಥ ದಿವಾಕರ
(30 September 1894 - 15 January 1990)

ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.  ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು.  1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...

READ MORE

Related Books