ಮನುಸ್ಮೃತಿ ಅಧ್ಯಾಯ 7

Author : ಬಿ.ಎಚ್. ಶ್ರೀಧರ

Pages 130

₹ 5.00




Year of Publication: 1974
Published by: ಕರ್ನಾಟಕ ವಿಶ್ವವಿದ್ಯಾಲಯ
Address: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

Synopsys

`ಮನುಸ್ಮೃತಿ’ ಬಿ.ಎಚ್. ಶ್ರೀಧರ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಆಧುನಿಕ ಮಾನವ ಜೀವನವು ಮಹತ್ವಪೂರ್ಣವಾದ ಪ್ರಗತಿಯ ಪಥದಲ್ಲಿ ಸಾಗುತ್ತಿರುವುದು ಸರ್ವವಿದಿತ ವಿಷಯವಾಗಿದೆ. ವೈಜ್ಞಾನಿಕ ಮನೋಭಾವ ಹಾಗೂ ತಾಂತ್ರಿಕ ಸಂಶೋಧನೆಗಳು ಈ ಪರಿವರ್ತನೆಯ ಪ್ರಮುಖ ಕಾರಣಗಳಾಗಿವೆ. ನೂತನ ವಿಜ್ಞಾನ ಬಿಡಿಸಿ, ತೋರುತ್ತಿರುವ ವಿಶ್ವದ ರಹಸ್ಯಗಳು, ಸಾಧಿಸಿರುವ ವಿಕ್ರಮಗಳು, ಪರಿಷ್ಕರಿಸುತ್ತಿರುವ ಪರಂಪರೆಯ ಮೌಲ್ಯಗಳು, ಈ ಹೊಸ ಬಾಳಿನ ತೋರಣವಾಗಿವೆ. ವಿಶ್ವ ಮಾನವ ಪ್ರಜ್ಞೆಯನ್ನು ಜಾಗೃತಗೊಳಿಸಿವೆ. ಈ ನೂತನ ಜ್ಞಾನ, ವ್ಯಕ್ತಿಜೀವಿತಕ್ಕೆ ಬೆಳಕು ನೀಡಿ, ಜನಾಂಗಗಳಲ್ಲಿ ಸಾಮರಸ್ಯ ಮೂಡಿಸಿ ಮಾನವ ಕೋಟಿಯ ಕಲ್ಯಾಣ ಸಾಧನೆಗೆ ಪ್ರೇರಕವಾಗಬೇಕಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಈ ದಿಸೆಯಲ್ಲಿ ತನ್ನ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ನೆರವೇರಿಸುತ್ತಾ ಬರುತ್ತಿರುವುದು ಗಮನಾರ್ಹವಾದದ್ದು.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books