ಶ್ರೀ ಭಾಗವತ ಕಥಾ ಪ್ರಪಂಚ

Author : ಕೆ.ಎಸ್‍. ನಾರಾಯಣಾಚಾರ್ಯ

Pages 360

₹ 315.00

Buy Now


Year of Publication: 2015
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 08362367676

Synopsys

ಶ್ರೀ ಭಾಗವತಾಧಾರಾತೀರ್ಥ ವಾಹಿನಿ ಶ್ರೀ ಭಾಗವತ ಕಥಾ ಪ್ರಪಂಚ-ಕೃತಿಯು ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿದ್ದು. ಸಕಲ ಪುರುಷಗಳ ಕಾಮಧೇನು ಎಂದರೆ ಭಗವದ್ಘೀತೆ. ಇದರ ಪಾರಾಯಣವು ಮನೋ-ದೈಹಿಕವಾದ ಎಲ್ಲ ಪಾಪಗಳನ್ನು ನಿವಾರಿಸಬಲ್ಲುದು ಎಂಬ ಬಲವಾದ ನಂಬಿಕೆ ವಿಶೇಷಷವಾಗಿ ಭಾರತೀಯರ ಮಾನಸದಲ್ಲಿ ಆಳವಾಗಿ ಬೇರೂರಿದೆ. ಹಸಿ-ಒಣ ಕಟ್ಟಿಗೆ, ಮರ-ಹುಲ್ಲು ಯಾವುದಾದರೇನು ಬೆಂಕಿಯು ಸುಡುವುದಿಲ್ಲವೇ? ಹಾಗೇ, ಭಗವದ್ಗೀತೆ ಪಾರಾಯಣದಿಂದ ಎಲ್ಲ ಕೆಟ್ಟ ಕರ್ಮಗಳು ನಾಶ ಹೊಂದುತ್ತವೆ. ಆದ್ದರಿಂದ, ಭಾಗವತ್ ಪಾರಾಯಣವನ್ನು ಸಮರ್ಥಿಸಿಕೊಳ್ಳಲಾದ ಈ ಗ್ರಂಥದಲ್ಲಿ ಮನುಷ್ಯ ಶಕ್ತಿಯನ್ನೂ ಮೀರಿದ ಒಂದು ಅಗೋಚರ ಶಕ್ತಿಯೊಂದು ಇದೆ ಎಂಬ ಗಾಢ ಅನುಭವ ನೀಡುವ ಕೃತಿ ಇದು.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books