ಸ್ವಾನುಭವದ ಸನ್ನಿಧಿಯಿಂದ

Author : ಎಸ್.ಎಂ. ದುಲಂಗೆ

Pages 194

₹ 150.00




Year of Publication: 2019
Published by: ವಿಶ್ವಗುರು ಬಸವೇಶ್ವರ ಪ್ರತಿಷ್ಠಾನ
Address: ಪಡಸಾವಳಿ, ತಾಲೂಕು: ಆಳಂದ, ಜಿಲ್ಲೆ: ಕಲಬುರಗಿ

Synopsys

ಹಿರಿಯ ಲೇಖಕ ಎಸ್.ಎಂ. ದುಲಂಗೆ ಅವರು ರಚಿಸಿರುವ ಕೃತಿ-‘ಸ್ವಾನುಭವದ ಸನ್ನಿಧಿಯಿಂದ’. ಲೇಖಕರು ತಮ್ಮ ಜೀವನಾನುಭವದಿಂದ ಕಂಡು ಕೊಂಡ ಅನುಭವಗಳನ್ನು ಅಕ್ಷರ ರೂಪದಲ್ಲಿ ಚಿಕ್ಕದಾಗಿ, ಚೊಕ್ಕವಾಗಿ ಸಂಗ್ರಹಿಸಿ ಕೊಟ್ಟಿದ್ದಾರೆ. ಅನುಭವದ ನುಡಿಮುತ್ತುಗಳೇ ಆಗಿವೆ. ಈ ಅನುಭವದ ಅಭಿವ್ಯಕ್ತಿಗೂ ಒಂದು ಶಿಸ್ತು ಕಲ್ಪಿಸಿದ್ದಾರೆ. ಉದಾಹರಣೆಗೆ ‘ಬದುಕು ನಮಗೆ ಬಂಡಿ. ಆದರೆ, ಬದುಕಿನ ಪ್ರವಾಸ ಆನಂದದಾಯಕ, ನಾವೇ ಅದಕ್ಕೆ ಬಂಡಿ ಆದರೆ ಅದನ್ನು ಎಳೆದುಕೊಂಡು ಹೋಗುವುದು ಪ್ರಯಾಸದಾಯಕ. ‘ಸೌಭಾಗ್ಯವು ಅನೇಕ ಸಲ ದೌರ್ಭಾಗ್ಯ ರೂಪದಲ್ಲಿ ಬರುತ್ತದೆ. ಮೊದಲು ನಾವು ಗೋಳಿಡುತ್ತೇವೆ ಆದರೆ, ಮುಂದೊಂದು ದಿನ ನಮ್ಮ ಅರಿವಿಗೆ ಬರುತ್ತದೆ’ ಪ್ರತಿ ಅನುಭವವು ಓದುಗರ ಬದುಕಿಗೆ ದಾರಿದೀಪವಾಗುವಂತಿವೆ. ಕೃತಿಯ ಮುಖಪುಟವು ಇಂತಹ ನುಡಿಮುತ್ತುಗಳಿಂದ ತುಂಬಿದ್ದು, ಕೃತಿಯನ್ನು ಇಡಿಯಾಗಿ ಓದಲು ಪ್ರೇರೇಪಿಸುತ್ತದೆ.

About the Author

ಎಸ್.ಎಂ. ದುಲಂಗೆ

ಹಿರಿಯ ಲೇಖಕ ಎಸ್.ಎಂ. ದುಲಂಗೆ ಅವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಆರ್ಥಶಾಸ್ತ್ರ) ಪದವೀಧರರು. ಆಳಂದ ತಾಲೂಕಿನ ತಡಕಲ ಗ್ರಾಮದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ನಂತರ ಮುಖ್ಯ ಅಧ್ಯಾಪಕರಾಗಿ ಈಗ ನಿವೃತ್ತರು. ತಮ್ಮ ಹುಟ್ಟೂರಾದ ಪಡಸಾವಳಿ ಯಲ್ಲಿ(1992) ಬಸವೇಶ್ವರ ಪ್ರತಿಷ್ಠಾಪನ ಸ್ಥಾಪಿಸಿ, ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಶ್ರಯಹೀನ, ವಯೋವೃದ್ಧರು, ಕಡುಬಡವರು, ವಿಧವೆಯರು ಹೀಗೆ ಪ್ರತಿ ತಿಂಗಳು ಒಟ್ಟು 11 ಜನರಿಗೆ ತಮ್ಮ ನಿವೃತ್ತಿ ವೇತನದಿಂದ ತಲಾ 300 ರೂ.ಗಳ ನೆರವು ನೀಡುತ್ತಾ ಬಂದಿದ್ದಾರೆ. ಅವರು ಆಳಂದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ...

READ MORE

Related Books