ಶ್ರೀ ಬದರೀಶ ಸ್ತೋತ್ರಮ್

Author : ವಿವಿಧ ಲೇಖಕರು

Pages 355

₹ 0.00




Year of Publication: 2019
Published by: ಸೆಂಟ್ರಲ್ ಚಿನ್ಮಯ ಮಿಷನ್ ಟ್ರಸ್ಟ್
Address: ಕನ್ನಡ ಪ್ರಕಟಣಾ ವಿಭಾಗ, ದೀನಬಂಧು ದೇವಸ್ಥಾನ, ಇಂದಿರಾನಗರ, ಬೆಂಗಳೂರು- 560038

Synopsys

‘ಶ್ರೀ ಬದರೀಶ ಸ್ತೋತ್ರಮ್’ ಕೃತಿಯು ಸ್ವಾಮೀ ಚಿನ್ಮಯಾನಂದ ಅವರ ಮೂಲ ಕೃತಿಯಾಗಿದ್ದು, ಸ್ವಾಮೀ ಆದಿತ್ಯಾನಂದ ಅವರ ಅನುವಾದಿತ ಗ್ರಂಥವಾಗಿದೆ. ಈ ಕೃತಿಯಲ್ಲಿನ ವಿಚಾರ ಹೀಗಿದೆ; ಸ್ವಾಮೀ ತಪೋವನರ ಅಲೌಕಿಕ ಅನುಭವ ಹಾಗೂ ತರ್ಕಬದ್ಧ ವಿಚಾರಣೆಗಳು, ಕಾವ್ಯಾತ್ಮಕವಾಗಿದ್ದು ತತ್ತ್ವಚಿಂತನೆಯನ್ನು ಒಳಗೊಂಡಿದೆ. ಸ್ವಾಮೀಜಿಯವರು ವ್ಯಾಸ-ವಾಲ್ಮೀಕಿಗಳ ಮಿಶ್ರಣರೂಪವಾಗಿ ನಮಗೆ ಕಾಣುತ್ತಾರೆ. ಅವರು ಅಧ್ಯಾತ್ಮ ಪ್ರಗತಿಯ ಉತ್ತುಂಗದಲ್ಲಿದ್ದಾಗ, ಈ ಕೃತಿಯನ್ನು ರಚಿಸಿದರು. ಪ್ರಕೃತಿಯ ಗುಣಗಳು ಸರ್ವದಾ ಜಡದಿಂದ ಕೂಡಿದ್ದು, ಅವು ಅಪೂರ್ಣವಾಗಿಯೇ ಇರುತ್ತವೆ. ಈ ಪಂಚಕೋಶಗಳು ಆತ್ಮನನ್ನು ಆವರಿಸಿರುವ ಕಾರಣದಿಂದಾಗಿ, ಆತನು ತಾನೇ ಪ್ರಪಂಚರೂಪಿ ಪಂಚಕೋಶಗಳೆಂದು ಭ್ರಮಿಸಿದ್ದಾನೆ. ತಾನು ಅನುಭವಿಸುವ ದುಃಖ ಹಾಗೂ ಅಸಾಮರ್ಥ್ಯತೆಯನ್ನು, ಆತ್ಮಮನದ್ದೆಂದು ಆರೋಪಮಾಡುತ್ತಾನೆ. ಹಿಂದೆ ತಿಳಿಸಿದಂತೆ ಹಗ್ಗದ ಅಗ್ರಹಣದಿಂದಾಗಿ ಹಾವಿನ ಅನ್ಯಥಾಗ್ರಹಣ ಉಂಟಾಗುವಂತೆ, ಪಂಚಕೋಶಗಳ ರೂಪದಲ್ಲಿ ಕಾಣುವುದನ್ನೆ ತಾನೆಂದು ಭ್ರಮಿಸಿ, ಮೋಹಕ್ಕೆ ಒಳಗಾಗುತ್ತಾನೆಂಬುದನ್ನು ಸ್ವಾಮೀ ತಪೋವನರು ತಿಳಿಸಿಯಾಗಿದೆ ಎನ್ನುತ್ತದೆ ಈ ಕೃತಿ.

About the Author

ವಿವಿಧ ಲೇಖಕರು

. ...

READ MORE

Related Books